ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಕೆ. ನಾಯ್ಡು ಕ್ರಿಕೆಟ್‌: ಆಂಧ್ರ ತಂಡ ಮರುಹೋರಾಟ

Last Updated 17 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇನಿಂಗ್ಸ್‌ ಹಿನ್ನಡೆ ಅನುಭವಿಸಿದ್ದ ಆಂಧ್ರ ತಂಡ ಸಿ.ಆರ್‌. ಜ್ಞಾನೇಶ್ವರ (117, 249ಎಸೆತ, 15ಬೌಂಡರಿ, 2 ಸಿಕ್ಸರ್‌) ಶತಕದ ಬಲದಿಂದ ಚೇತರಿಸಿಕೊಂಡು ಕರ್ನಾಟಕ ವಿರುದ್ಧದ 23 ವರ್ಷದ ಒಳಗಿನವರ ಸಿ.ಕೆ. ನಾಯ್ಡು ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಮರುಹೋರಾಟ ನಡೆಸಿದೆ.

ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಂಧ್ರ ತಂಡ ಮೊದಲ ಇನಿಂಗ್ಸ್‌ನಲ್ಲಿ 99 ರನ್‌ಗಳ ಹಿನ್ನಡೆ ಕಂಡಿತ್ತು. ಈ ತಂಡ ಎರಡನೇ ದಿನವಾದ ಸೋಮವಾರ ರನ್ ಖಾತೆ ಆರಂಭಿಸಿರಲಿಲ್ಲ. ಮಂಗಳವಾರ 90 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 299 ರನ್‌ ಗಳಿಸಿದೆ.

ಮೊದಲ ಇನಿಂಗ್ಸ್‌ನ ರನ್‌ ಚುಕ್ತಾ ಮಾಡಿರುವ ಆಂಧ್ರ ತಂಡದ ಖಾತೆಯಲ್ಲಿ ಈಗ 200 ರನ್‌ಗಳು ಇವೆ. ಒಂದು ದಿನದ ಆಟ ಬಾಕಿಯಿದ್ದು ಕರ್ನಾಟಕ ತಂಡದವರು ದೀಪಾವಳಿ ಹಬ್ಬಕ್ಕೆ ಗೆಲುವಿನ ಉಡುಗೊರೆ ನೀಡಲು ಕಾಯುತ್ತಿದ್ದಾರೆ. ಈ ಆಸೆ ಈಡೇರಬೇಕಾದರೆ ಗುರುವಾರ ಆಂಧ್ರ ತಂಡವನ್ನು ಬೇಗನೆ ಕಟ್ಟಿಹಾಕಿ ಗುರಿ ಮುಟ್ಟಲು ಹೋರಾಡಬೇಕಿದೆ.

ಆಂಧ್ರ ತಂಡ ಆರನೇ ಓವರ್‌ನಲ್ಲಿ ಮೊದಲ ವಿಕೆಟ್‌ ಕಳೆದುಕೊಂಡಿತು. ನಂತರ ಮೂರನೇ ವಿಕೆಟ್ ಜೊತೆಯಾಟದಲ್ಲಿ ಜ್ಞಾನೇಶ್ವರ ಮತ್ತು ಕರಣ್‌ ಶಿಂಧೆ (57, 108 ಎಸೆತ, 9ಬೌಂಡರಿ) 100 ರನ್‌ ಕಲೆ ಹಾಕಿದರು. ಮಧ್ಯಮ ಕ್ರಮಾಂಕದಲ್ಲಿ ಧ್ರುವಕುಮಾರ ರೆಡ್ಡಿ (63, 104 ಎಸೆತ, 4 ಬೌಂಡರಿ, 3 ಸಿಕ್ಸರ್‌) ನೆರವಾಗಿ ತಂಡದ ಉತ್ತಮ ಮೊತ್ತಕ್ಕೆ ಕಾರಣರಾದರು.

ಸಂಕ್ಷಿಪ್ತ ಸ್ಕೋರು: ಆಂಧ್ರ ಮೊದಲ ಇನಿಂಗ್ಸ್‌ 172 ಹಾಗೂ ದ್ವಿತೀಯ ಇನಿಂಗ್ಸ್‌ 90 ಓವರ್‌ಗಳಲ್ಲಿ 6 ವಿಕೆಟ್‌ಗೆ 299 (ಸಿ.ಆರ್‌. ಜ್ಞಾನೇಶ್ವರ 117, ಚರಣ್‌ ಸಾಯಿ 19, ಕರಣ್‌ ಶಿಂಧೆ 57, ಧ್ರುವಕುಮಾರ ರೆಡ್ಡಿ 63; ಶುಭಾಂಗ ಹೆಗ್ಡೆ 31ಕ್ಕೆ2, ಪ್ರತೀಕ್‌ ಜೈನ್‌ 31ಕ್ಕೆ1, ಎಸ್‌. ಆದಿತ್ಯ 34ಕ್ಕೆ2, ಕೆ.ಎನ್‌. ಭರತ್‌ 9ಕ್ಕೆ1). ಕರ್ನಾಟಕ ಮೊದಲ ಇನಿಂಗ್ಸ್‌ 85.3 ಓವರ್‌ಗಳಲ್ಲಿ 271.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT