ದಾಖಲೆ ನಿರ್ಮಿಸಿದ ರೋಹಿತ್

ಸೋಮವಾರ, ಜೂನ್ 17, 2019
22 °C
ಪ್ರೊ ಕಬಡ್ಡಿ: 40 ಪಾಯಿಂಟ್ಸ್‌ನಿಂದ ಸೋತ ಯೋಧಾ

ದಾಖಲೆ ನಿರ್ಮಿಸಿದ ರೋಹಿತ್

Published:
Updated:
ದಾಖಲೆ ನಿರ್ಮಿಸಿದ ರೋಹಿತ್

ಪುಣೆ (ಪಿಟಿಐ): ಭಾರಿ ಮಳೆಯಿಂದ ಮುಂದೂಡಿದ ಮತ್ತು ಸ್ಥಳಾಂತರಗೊಂಡ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡದವರು ಪಾಯಿಂಟ್‌ಗಳ ಮಳೆ ಸುರಿಸಿದರು.

31 ರೈಡ್‌ಗಳಲ್ಲಿ 30 ಪಾಯಿಂಟ್‌ ಹೆಕ್ಕಿ ತಂದ ನಾಯಕ ರೋಹಿತ್ ಕುಮಾರ್ ಅವರ ದಾಖಲೆ ಆಟದ ಬಲದಿಂದ ಈ ತಂಡ ಯು.ಪಿ.ಯೋಧಾವನ್ನು 40 (64–24) ಪಾಯಿಂಟ್‌ಗಳ ಅಂತರದಿಂದ ಮಣಿಸಿತು. ಪ್ರೊ ಕಬಡ್ಡಿ ಟೂರ್ನಿಯ ಪಂದ್ಯವೊಂದರಲ್ಲಿ ಅತಿ ಹೆಚ್ಚು ಪಾಯಿಂಟ್ ಗಳಿಸಿದ ಹೆಗ್ಗಳಿಕೆ ರೋಹಿತ್ ಅವರದಾಯಿತು.

ಆರಂಭದಿಂದಲೇ ಭರ್ಜರಿ ಆಟವಾಡಿದ ಬುಲ್ಸ್‌ ಮಧ್ಯಂತರ ಅವಧಿಯಲ್ಲಿ 17 ಪಾಯಿಂಟ್‌ಗಳ ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದಲ್ಲೂ ಯೋಧಾ ಆಟ ನಡೆಯಲಿಲ್ಲ.ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡದ ಪುಣೇರಿ ಪಲ್ಟನ್ ವಿರುದ್ಧ 31–27ರಿಂದ ಗೆದ್ದಿತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry