ಮಂಗಳವಾರ, ಸೆಪ್ಟೆಂಬರ್ 17, 2019
21 °C

ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ತಂಡ

Published:
Updated:

ಶಿವಮೊಗ್ಗದಲ್ಲಿ ಇದೇ 24ರಿಂದ ನಡೆಯುವ ಹೈದರಾಬಾದ್ ವಿರುದ್ಧದ ರಣಜಿ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯದ ಕೆ.ಎಲ್. ರಾಹುಲ್ ಹಾಗೂ ಕರುಣ್ ನಾಯರ್ ರಾಜ್ಯ ತಂಡಕ್ಕೆ ಮರಳಿದ್ದಾರೆ.

ಡಿ. ನಿಶ್ಚಲ್ ಹಾಗೂ ಅಭಿಷೇಕ್‌ ರೆಡ್ಡಿ ಅವರನ್ನು ಕೈಬಿಡಲಾಗಿದೆ. ಇವರು 23 ವರ್ಷದೊಳಗಿನವರ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.

ತಂಡ ಇಂತಿದೆ: ವಿನಯ್ ಕುಮಾರ್‌ (ನಾಯಕ), ಆರ್‌. ಸಮರ್ಥ್‌, ಕೆ.ಎಲ್.ರಾಹುಲ್‌, ಕರುಣ್ ನಾಯರ್‌, ಮಯಂಕ್ ಅಗರವಾಲ್‌, ಮೀರ್ ಕೌನೇನ್‌ ಅಬ್ಬಾಸ್‌, ಪವನ್ ದೇಶ್‌ಪಾಂಡೆ, ಸಿ.ಎಂ.ಗೌತಮ್‌ (ವಿಕೆಟ್ ಕೀಪರ್‌), ಸ್ಟುವರ್ಟ್‌ ಬಿನ್ನಿ, ಕೆ.ಗೌತಮ್‌, ಅಭಿಮನ್ಯು ಮಿಥುನ್‌, ಎಸ್‌.ಅರವಿಂದ್‌, ಶ್ರೇಯಸ್‌ ಗೋಪಾಲ್‌, ಜೆ.ಸುಚಿತ್‌, ಶರತ್ ಶ್ರೀನಿವಾಸ್‌ (ವಿಕೆಟ್‌ ಕೀಪರ್‌).

Post Comments (+)