ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದು ನಿರ್ಧಾರ ಬೆಂಬಲಿಸಿದ್ದಕ್ಕೆ ಕ್ಷಮೆ ಕೋರಿದ ಕಮಲಹಾಸನ್

Last Updated 18 ಅಕ್ಟೋಬರ್ 2017, 10:06 IST
ಅಕ್ಷರ ಗಾತ್ರ

ಚೆನ್ನೈ: ದೊಡ್ಡ ಮುಖಬೆಲೆಯ ನೋಟು ರದ್ದು ಕ್ರಮವನ್ನು ಬೆಂಬಲಿಸಿದ್ದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ತಮಿಳು ನಟ ಕಮಲಹಾಸ್ ಹೇಳಿದ್ದಾರೆ.

ತಮಿಳು ನಿಯತಕಾಲಿಕೆ ‘ಆನಂದವಿಕಟನ್‌’ಗೆ ಬರೆದ ಲೇಖನವೊಂದರಲ್ಲಿ ಕಮಲಹಾಸನ್ ಈ ಕುರಿತು ಪ್ರಸ್ತಾಪಿಸಿದ್ದಾರೆ.

ನೋಟು ರದ್ದು ನಿರ್ಧಾರ ತಪ್ಪು ಎಂದು ಪ್ರಧಾನಿ ನರೇಂದ್ರ ಮೋದಿಯವರು ಒಪ್ಪಿಕೊಂಡರೆ ಮತ್ತೆ ಅವರಿಗೆ ಬೆಂಬಲ ಸೂಚಿಸುತ್ತೇನೆ. ತಪ್ಪನ್ನು ಒಪ್ಪಿಕೊಂಡು ತಿದ್ದಿಕೊಳ್ಳುವುದೂ ಮುಖ್ಯ. ಮಹಾತ್ಮ ಗಾಂಧಿ ಅವರಂಥ ನಾಯಕರು ಇದನ್ನು ತೋರಿಸಿಕೊಟ್ಟಿದ್ದಾರೆ ಎಂದು ಕಮಲಹಾಸನ್ ಹೇಳಿದ್ದಾರೆ.

₹ 500 ಮತ್ತು ₹ 1,000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಕಮಲಹಾಸನ್ ಹೊಗಳಿದ್ದರಲ್ಲದೆ, ಬೆಂಬಲ ಸೂಚಿಸಿದ್ದರು.

‘ಕಪ್ಪುಹಣವನ್ನು ನಿರ್ಮೂಲನೆಗೊಳಿಸುವ ಸಲುವಾಗಿ ಕೈಗೊಂಡ ನೋಟು ರದ್ದತಿ ಕ್ರಮದಿಂದ ಜನರಿಗೆ ಸಣ್ಣಪುಟ್ಟ ತೊಂದರೆಗಳಾಗಬಹುದು ಎಂದು ಭಾವಿಸಿದ್ದೆ. ನೋಟು ರದ್ದತಿ ತೀರ್ಮಾನ ಉತ್ತಮವಾದದ್ದೇ. ಆದರೆ, ಅದನ್ನು ಜಾರಿಗೊಳಿಸಿದ ರೀತಿ ಸಮರ್ಪಕವಾಗಿರಲಿಲ್ಲ’ ಎಂದು ಅವರು ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT