ನೀರು ತರಲು ಹೋಗಿ ಅಕಸ್ಮಿಕವಾಗಿ ಬಾವಿಗೆ ಬಿದ್ದು ಬಾಲಕಿ ಸಾವು

ಬುಧವಾರ, ಜೂನ್ 19, 2019
32 °C

ನೀರು ತರಲು ಹೋಗಿ ಅಕಸ್ಮಿಕವಾಗಿ ಬಾವಿಗೆ ಬಿದ್ದು ಬಾಲಕಿ ಸಾವು

Published:
Updated:
ನೀರು ತರಲು ಹೋಗಿ ಅಕಸ್ಮಿಕವಾಗಿ ಬಾವಿಗೆ ಬಿದ್ದು ಬಾಲಕಿ ಸಾವು

ಚಿಂಚೋಳಿ: ಬಟ್ಟೆ ತೊಳೆಯಲು ನೀರು ತರಲೆಂದು ತೆರಳಿದ್ದ 11ವರ್ಷದ ಬಾಲಕಿ ಸೀಮಾ ಗೇಮು ಚವ್ಹಾಣ (11) ಅಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಸೇರಿಬಡಾ ತಾಂಡಾದಲ್ಲಿ ಬುಧವಾರ ನಡೆದಿದೆ.

ಬೆಳಿಗ್ಗೆ 10ಗಂಟೆ ಸುಮಾರಿಗೆ ಬಟ್ಟೆ ತೊಳೆಯಲು ದಂಡೆಯ ಮೇಲೆ ಬಟ್ಟೆಯ ಬುಟ್ಟಿ ಇಟ್ಟು ನೀರು ತೆಗೆದುಕೊಳ್ಳಲು ಬಾಲಕಿ ಬಾವಿಗೆ ಇಳಿದಿದ್ದಾಳೆ. ಕಲ್ಲಿನ ಮೇಲೆ ನಿಂತು ನೀರು ತುಂಬಿಕೊಳ್ಳುವಾಗ ಕಲ್ಲು ಜಾರಿ ಬಾವಿಗೆ ಬಿದ್ದಿದೆ. ಅಗ ಬಾಲಕಿ ನೀರು ಪಾಲಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ತಂದೆ ಗೇಮು ಚವ್ಹಾಣ ನೀಡಿದ ದೂರಿನ ಮೇರೆಗೆ ರಟಕಲ್ ಠಾಣೆಯ ಸಹಾಯಕ ಸಬ್ ಇನಸ್ಪೆಕ್ಟರ್ ರಾಮಲಿಂಗ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಸಂಸದೀಯ ಕಾರ್ಯದರ್ಶಿ ಡಾ. ಉಮೇಶ ಜಾಧವ್ ಭೇಟಿ ನೀಡಿ ಸಾಂತ್ವನ ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry