ಹೊಸ ಧಾರಾವಾಹಿ ‘ಶನಿ’

7

ಹೊಸ ಧಾರಾವಾಹಿ ‘ಶನಿ’

Published:
Updated:
ಹೊಸ ಧಾರಾವಾಹಿ ‘ಶನಿ’

ಕಲರ್ಸ್‌ ಕನ್ನಡದಲ್ಲಿ ಅಕ್ಟೋಬರ್ 23ರಂದು ರಾತ್ರಿ 8.30ಕ್ಕೆ ನ್ಯಾಯದ ಅಧಿದೇವತೆ ಶನಿಯ ಕಥೆ ಹೇಳುವ ‘ಶನಿ’ ಧಾರಾವಾಹಿ ಪ್ರಸಾರವಾಗಲಿದೆ.

ನಾವು ಏನನ್ನು ಬಿತ್ತುತ್ತೇವೆಯೋ ಅದೇ ಫಲ ಪಡೆಯುತ್ತೇವೆ. ನಾವು ಮಾಡುವ ಕಾರ್ಯಗಳು ನಮ್ಮ ಕರ್ಮಫಲ ನಿರ್ಧರಿಸುತ್ತವೆ ಎಂಬ ಮಾತು ಹಿಂದೂ ಧರ್ಮಶಾಸ್ತ್ರದಲ್ಲಿದೆ. ಇದು ಶನಿಯ ಕೃಪೆಗೆ ಪಾತ್ರರಾಗುವಂತಹ ಶನಿದೇವರ ಮಹಿಮೆ ಸಾರುವ ಧಾರಾವಾಹಿ.

ಸೂರ್ಯ ದೇವನಿಗೆ ಹುಟ್ಟಿದ ಶನಿಯು ಬ್ರಹ್ಮ, ವಿಷ್ಟು, ಶಿವನಿಂದ ಆಶೀರ್ವಾದ ಪಡೆದು ನ್ಯಾಯಾಧಿಪತಿಯಾಗಿ ಅಂದಿನಿಂದಲೂ ಕಾರ್ಯ ನಿರ್ವಹಿಸುತ್ತಾ ಬರುತ್ತಿದ್ದಾನೆ.

ಹಿಂದಿ ಭಾಷೆಯಲ್ಲಿ ಮೂಡಿಬರುತ್ತಿರುವ ‘ಮಹಾಕಾಳಿ’, ‘ಮಹಾಭಾರತ’ ಧಾರಾವಾಹಿ ನಿರ್ಮಿಸಿದ ಸ್ವಸ್ತಿಕ್ ಪ್ರೊಡಕ್ಷನ್ ನಿರ್ಮಾಣದಲ್ಲಿಯೇ ಈ ಧಾರಾವಾಹಿ ಮೂಡಿಬರಲಿದೆ. ಇದು ಮುಂಬೈನಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಅದ್ದೂರಿ ಧಾರಾವಾಹಿಯೂ ಹೌದು.

ಶನಿ ಪಾತ್ರಧಾರಿಯಾಗಿ ಸುನಿಲ್‌ ಕುಮಾರ್‌ ಅಭಿನಯಿಸಲಿದ್ದಾರೆ. ಈ ಪಾತ್ರಕ್ಕೆ 55 ಮಕ್ಕಳ ಆಡಿಷನ್‌ ನಡೆಸಲಾಗಿತ್ತು. ಕೊನೆಗೆ, ಸುನಿಲ್‌ಕುಮಾರ್‌ ಆಯ್ಕೆಯಾದರು. ಸೂರ್ಯನ ಪಾತ್ರಧಾರಿಯಾಗಿ ರಂಜಿತ್‌ ಅಭಿನಯಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 0

  Frustrated
 • 0

  Angry