ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9ರ ಬಾಲಕಿಯ ಮೇಲೆ ಕುಳಿತ 145ಕೆ.ಜಿ. ತೂಕದ ಮಹಿಳೆ: ಶಿಸ್ತು ಕಲಿಸಲು ಬಂದವಳು ಪ್ರಾಣ ತೆಗೆದಳು!

Last Updated 19 ಅಕ್ಟೋಬರ್ 2017, 15:37 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ತುಂಟತನದಿಂದ ವರ್ತಿಸುತ್ತಿದ್ದ 9 ವಯಸ್ಸಿನ ಬಾಲಕಿಯ ಮೇಲೆ 145ಕೆ.ಜಿ ತೂಕದ ಮಹಿಳೆ ಕುಳಿತು ಶಿಕ್ಷಿಸಿದ ಪರಿಣಾಮ, ಉಸಿರಾಟದ ಸಮಸ್ಯೆಗೊಳಗಾದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಘಟನೆ ಫ್ಲೋರಿಡಾದಲ್ಲಿರುವ ಬಾಲಕಿಯ ಮನೆಯಲ್ಲೇ ನಡೆದಿದೆ. ಮಹಿಳೆಯ ಭಾರೀ ತೂಕ ತಾಳಲಾರದೆ ಬಾಲಕಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಬಳಿಕ ತೀವ್ರ ಹೃದಯಾಘಾತವಾಗಿದ್ದು ಈ ದುರಂತ ನಡೆದಿದೆ.

ಈ ಸಂಬಂಧ ಬಾಲಕಿಯ ಸೋದರ ಸಂಬಂಧಿ 64 ವರ್ಷದ ಆರೋಪಿ ವೆರೋನಿಕಾ ಪೋಸ್ಸಿಯನ್ನು ಕೊಲೆ ಪ್ರಕರಣದ ಆರೋಪದಲ್ಲಿ ಬಂಧಿಸಲಾಗಿದೆ.

‘ಸೋದರ ಸಂಬಂಧಿ ಡೆರಿಕ್‌ ಲಿಂಡ್ಸೆ ತನ್ನೊಡನೆ ಅಸಭ್ಯವಾಗಿ ವರ್ತಿಸಿದಳು. ಹಾಗಾಗಿ ಅವಳನ್ನು ಶಿಕ್ಷಿಸಲು ಆಕೆಯ ಮೇಲೆ ಕುಳಿತೆ. ಕೆಲ ನಿಮಿಷದಲ್ಲೇ ಉಸಿರಾಡಲು ಕಷ್ಟವಾಗುತ್ತಿರವುದಾಗಿ ಚೀರಿಕೊಂಡಳು. ನಾನು ಮೇಲೇಳುವುದರೊಳಗೆ ಪ್ರಜ್ಞೆ ತಪ್ಪಿದಳು’ ಎಂದು ಪೋಸ್ಸಿ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ.

‘ಲಿಂಡ್ಸೆ ತುಂಟಿಯಾಗಿದ್ದಳು ಹಾಗಾಗಿ ಅವಳನ್ನು ನಿಭಾಯಿಸುವುದು ನನಗೆ ಕಷ್ಟವಾಗುತ್ತಿತ್ತು. ಲಿಂಡ್ಸೆಗೆ ಶಿಸ್ತು ಕಲಿಸುವ ಸಲುವಾಗಿ ತನ್ನ ಸಂಬಂಧಿಯಾದ ಪೊಸ್ಸಿಯನ್ನು ಸಹಾಯಕ್ಕಾಗಿ ಕರೆಸಿಕೊಂಡಿದ್ದೆ’ ಎಂದು ಬಾಲಕಿಯ ತಾಯಿ ಗ್ರೇಸ್‌ ಸ್ಮಿತ್‌(69) ತನಿಖಾಧಿಕಾರಿಗಳಿಗೆ ತಿಳಿಸಿದ್ದಾಳೆ.

ಮೃತ ಲಿಂಡ್ಸೆ ಕೇವಲ 3 ಅಡಿ ಎತ್ತರ ಹಾಗೂ 33ಕೆ.ಜಿ ತೂಕವಿದ್ದಳು. ಇದು ಪೊಸ್ಸಿ ದೇಹದ ತೂಕದ ನಾಲ್ಕನೇ ಒಂದರಷ್ಟಾಗುತ್ತದೆ. ತನಿಖೆ ಪ್ರಗತಿಯಲ್ಲಿದ್ದು, ಪೊಸ್ಸಿ ಬಾಲಕಿಯ ಮೇಲೆ ಎಷ್ಟು ಸಮಯದವರೆಗೆ ಕುಳಿತಿದ್ದಳು ಎನ್ನುವುದು ತಿಳಿದು ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT