ಕುಸ್ತಿ ತಂಡದಲ್ಲಿ ಬಜರಂಗ್‌ಗೆ ಸ್ಥಾನ

ಭಾನುವಾರ, ಮೇ 19, 2019
34 °C

ಕುಸ್ತಿ ತಂಡದಲ್ಲಿ ಬಜರಂಗ್‌ಗೆ ಸ್ಥಾನ

Published:
Updated:

ಸೋನೆಪತ್‌ : ಏಷ್ಯನ್‌ ಚಾಂಪಿಯನ್‌ ಬಜರಂಗ್‌ ಪೂನಿಯಾ ಅವರು ಮುಂದಿನ ತಿಂಗಳು ಪೋಲೆಂಡ್‌ನಲ್ಲಿ ನಡೆಯುವ 23 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಈ ವರ್ಷದ ಆಗಸ್ಟ್‌ನಲ್ಲಿ ಪ್ಯಾರಿಸ್‌ನಲ್ಲಿ ನಡೆದಿದ್ದ ಸೀನಿಯರ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದ ಬಜರಂಗ್‌, ಪುರುಷರ 65 ಕೆ.ಜಿ ಫ್ರೀ ಸ್ಟೈಲ್‌ನಲ್ಲಿ ಭಾರತದ ಸವಾಲು ಎತ್ತಿ ಹಿಡಿಯಲಿದ್ದಾರೆ.

ಉತ್ಕರ್ಷ್‌ ಕಾಳೆ (57 ಕೆ.ಜಿ) ಮತ್ತು ರವಿಂದರ್‌ (61 ಕೆ.ಜಿ) ಅವರೂ ತಂಡದಲ್ಲಿದ್ದು ಭಾರತದ ಭರವಸೆ ಎನಿಸಿದ್ದಾರೆ.

ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಎಂಟು ಮಂದಿಯ ಗ್ರೀಕೊ ರೋಮನ್‌ ತಂಡವನ್ನೂ ಪ್ರಕಟಿಸಿದೆ.

ತಂಡ ಇಂತಿದೆ: ಫ್ರೀಸ್ಟೈಲ್‌: ಉತ್ಕರ್ಷ್‌ ಕಾಳೆ (57 ಕೆ.ಜಿ), ರವಿಂದರ್‌ (61 ಕೆ.ಜಿ), ಬಜರಂಗ್‌ (65 ಕೆ.ಜಿ), ವಿನೋದ್‌ ಕುಮಾರ್‌ (70 ಕೆ.ಜಿ), ದಿನೇಶ್‌ (74 ಕೆ.ಜಿ), ದೀಪಕ್‌ (86 ಕೆ.ಜಿ), ವಿಕಿ (97 ಕೆ.ಜಿ), ಪುಷ್ಪೇಂದ್ರ ಸಿಂಗ್‌ (125 ಕೆ.ಜಿ).

ಗ್ರಿಕೊ ರೋಮನ್‌ ತಂಡ: ಜ್ಞಾನೇಂದ್ರ (59 ಕೆ.ಜಿ), ಮನೀಷ್‌ (66 ಕೆ.ಜಿ), ಯೋಗೇಶ್‌ (71 ಕೆ.ಜಿ), ಮಂಜೀತ್‌ (75 ಕೆ.ಜಿ), ದೀಪಕ್‌ ಗುಲಿಯಾ (80 ಕೆ.ಜಿ), ಸುನಿಲ್‌ (85 ಕೆ.ಜಿ), ಸುಮಿತ್‌ (98 ಕೆ.ಜಿ), ಮೆಹರ್‌ ಸಿಂಗ್ (130 ಕೆ.ಜಿ).

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry