ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಯೀದ್‌ ಗೃಹಬಂಧನ ಅವಧಿ ವಿಸ್ತರಣೆ

Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಲಾಹೋರ್‌: ಮುಂಬೈ ದಾಳಿಯ ಸಂಚುಕೋರ ಹಾಗೂ ನಿಷೇಧಿತ ಜಮಾತ್‌– ಉದ್‌– ದವಾ ಸಂಘಟನೆಯ ಮುಖ್ಯಸ್ಥ ಹಫೀಜ್‌ ಸಯೀದ್‌ನ ಗೃಹಬಂಧನದ ಅವಧಿಯನ್ನು 30 ದಿನಗಳವರೆಗೆ ವಿಸ್ತರಿಸಿ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ನ್ಯಾಯಾಂಗ ಪರಿಶೀಲನಾ ಮಂಡಳಿ ಗುರುವಾರ ಆದೇಶ ಹೊರಡಿಸಿದೆ.

ಆದರೆ, ಆತನ ನಾಲ್ವರು ಸಹಚರರ ಗೃಹಬಂಧನದ ಅವಧಿ ವಿಸ್ತರಿಸಲು ನ್ಯಾಯಾಲಯ ನಿರಾಕರಿಸಿದೆ. ಇದರಿಂದ, ಇತರ ಯಾವುದೇ ಪ್ರಕರಣದಲ್ಲಿ ಸರ್ಕಾರ ಬಂಧಿಸದೇ ಇದ್ದಲ್ಲಿ, ಈ ನಾಲ್ವರು ಈ ತಿಂಗಳ ಕೊನೆಯಲ್ಲಿ ಬಂಧಮುಕ್ತರಾಗಲಿದ್ದಾರೆ.

ಹಫೀಜ್‌ ಗೃಹಬಂಧನ ಅವಧಿ 3 ತಿಂಗಳು ವಿಸ್ತರಿಸುವಂತೆ ಮಂಡಳಿಗೆ ಗೃಹ ಇಲಾಖೆ ಮನವಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT