ಬೈಕ್ ಡಿಕ್ಕಿಯಾಗಿ 7 ವರ್ಷದ ಬಾಲಕಿ ಸಾವು

ಗುರುವಾರ , ಜೂನ್ 20, 2019
24 °C

ಬೈಕ್ ಡಿಕ್ಕಿಯಾಗಿ 7 ವರ್ಷದ ಬಾಲಕಿ ಸಾವು

Published:
Updated:

ಬೆಂಗಳೂರು: ಚಿಕ್ಕಜಾಲದ ಮಾರನಾಯಕನಹಳ್ಳಿ ಕಾಲೊನಿಯಲ್ಲಿ ಗುರುವಾರ ಸಂಜೆ ಬೈಕ್ ಡಿಕ್ಕಿಯಾಗಿ ಬಾಲಕಿ ಸಹನಾ (7) ಮೃತಪಟ್ಟಿದ್ದಾಳೆ.

ಸಹನಾ, ಮಾರನಾಯಕನಹಳ್ಳಿ ನಿವಾಸಿ ವೆಂಕಟೇಶ್ ಎಂಬುವರ ಮಗಳು. ಮನೆ ಮುಂದೆ ಪಟಾಕಿ ಸಿಡಿಸುವುದನ್ನು ಆಕೆ ನೋಡುತ್ತಾ ನಿಂತಿದ್ದಳು. ಅದೇ ಕಾಲೊನಿಯ ನಿವಾಸಿ ರಾಜು(18) ಅಲಿಯಾಸ್ ಬಂಗಾರಿ ಅಡ್ಡಾದಿಡ್ಡಿಯಾಗಿ ಬೈಕ್ ಓಡಿಸಿಕೊಂಡು ಬಂದು ಆಕೆಗೆ ಗುದ್ದಿದ್ದಾನೆ.

ಬಾಲಕಿ ಕೆಳಗೆ ಬಿದ್ದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಳು. ಪೋಷಕರು ಯಲಹಂಕದ ಆಸ್ಪತ್ರೆಗೆ ಆಕೆಯನ್ನು ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾಳೆ. ಆರೋಪಿ ರಾಜು ಸ್ವಲ್ಪ ದೂರದಲ್ಲೇ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ ಎಂದು ಚಿಕ್ಕಜಾಲ ಸಂಚಾರ ಪೊಲೀಸರು ತಿಳಿಸಿದರು.

ಬಾಲಕಿಯ ಪೋಷಕರು ದೂರು ಕೊಟ್ಟಿಲ್ಲ. ದೂರು ನೀಡುವಂತೆ ಅವರಿಗೆ ಮನವಿ ಮಾಡುತ್ತೇವೆ. ಒಂದು ವೇಳೆ ಅವರು ದೂರು ನೀಡದಿದ್ದರೆ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ ಎಂದು ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry