ಬುಧವಾರ, ಸೆಪ್ಟೆಂಬರ್ 18, 2019
21 °C

ಕೋಲ್ಕತ್ತ: ವಾಣಿಜ್ಯ ಸಂಕೀರ್ಣದಲ್ಲಿ ಅಗ್ನಿ ಅನಾಹುತ

Published:
Updated:
ಕೋಲ್ಕತ್ತ: ವಾಣಿಜ್ಯ ಸಂಕೀರ್ಣದಲ್ಲಿ ಅಗ್ನಿ ಅನಾಹುತ

ಕೋಲ್ಕತ್ತ: ಇಲ್ಲಿನ ಜವಹರ್‌ಲಾಲ್‌ ನೆಹರು ರಸ್ತೆಯ ಜೀವನ್‌ ಸೌಧ ವಾಣಿಜ್ಯ ಸಂಕೀರ್ಣದ 16ನೇ ಅಂತಸ್ತಿನಲ್ಲಿ ಗುರುವಾರ ಅಗ್ನಿ ಅನಾಹುತ ಸಂಭವಿಸಿದೆ.

‘ಕಟ್ಟಡದ 16ನೇ ಅಂತಸ್ತಿನಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ(ಎಸ್‌ಬಿಐ) ಕಚೇರಿ ಇದ್ದು, ಅದರಲ್ಲಿ ಯಾರೂ ಸಿಲುಕಿರುವ ಸಾಧ್ಯತೆ ಇಲ್ಲ’ ಎಂದು ಎಸ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ.

10 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ. ಒಟ್ಟು 19 ಅಂತಸ್ತಿನ ಈ ಕಟ್ಟಡದಲ್ಲಿ ಎಸ್‌ಬಿಐ, ಎಲ್‌ಐಸಿ ಹಾಗೂ ಹಲವು ಹಣಕಾಸು ಸಂಸ್ಥೆಗಳ ಕಚೇರಿಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Post Comments (+)