ಪರೀಫ್ ವಿರುದ್ಧ ದೋಷಾರೋಪ

ಶನಿವಾರ, ಮೇ 25, 2019
27 °C

ಪರೀಫ್ ವಿರುದ್ಧ ದೋಷಾರೋಪ

Published:
Updated:
ಪರೀಫ್ ವಿರುದ್ಧ ದೋಷಾರೋಪ

ಇಸ್ಲಾಮಾಬಾದ್: ಲಂಡನ್ನಿನ ಅವೆನ್‌ಫೀಲ್ಡ್ ಆಸ್ತಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್, ಅವರ ಮಗಳು ಮರಿಯಮ್ ನವಾಜ್ ಹಾಗೂ ಅಳಿಯ ಮೊಹಮ್ಮದ್ ಸಫ್ದರ್ ಅವರ ವಿರುದ್ಧ ಇಲ್ಲಿನ ಭ್ರಷ್ಟಾಚಾರ ತಡೆ ನ್ಯಾಯಾಲಯವು ಗುರುವಾರ ದೋಷಾರೋಪ ಹೊರಿಸಿದೆ.

ಮರಿಯಮ್ ಮತ್ತು ಸಫ್ದರ್ ಗುರುವಾರದ ವಿಚಾರಣೆಯ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದರು. ನವಾಜ್ ಷರೀಫ್ ಸದ್ಯ ಲಂಡನ್ನಿನಲ್ಲಿದ್ದಾರೆ.

ಷರೀಫ್ ಹಾಗೂ ಅವರ ಪುತ್ರರಾದ ಹಸನ್ ಮತ್ತು ಹುಸೇನ್ ಮೇಲೆ ಬೇರೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದೋಷಾರೋಪ ಹೊರಿಸುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry