ವಾಣಿಜ್ಯ ವ್ಯವಹಾರಕ್ಕೆ ರಂಗಮಂದಿರ ಕನ್ನಡ ಸಂಘಟನೆಗಳ ಪ್ರತಿಭಟನೆ

ಬುಧವಾರ, ಜೂನ್ 19, 2019
29 °C
ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿಗೆ ಮುತ್ತಿಗೆ

ವಾಣಿಜ್ಯ ವ್ಯವಹಾರಕ್ಕೆ ರಂಗಮಂದಿರ ಕನ್ನಡ ಸಂಘಟನೆಗಳ ಪ್ರತಿಭಟನೆ

Published:
Updated:
ವಾಣಿಜ್ಯ ವ್ಯವಹಾರಕ್ಕೆ ರಂಗಮಂದಿರ ಕನ್ನಡ ಸಂಘಟನೆಗಳ ಪ್ರತಿಭಟನೆ

ಬೆಂಗಳೂರು: ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೀಸಲಿಟ್ಟ ರಾಜರಾಜೇಶ್ವರಿ ನಗರದ ಟಿ.ಎನ್.ಬಾಲಕೃಷ್ಣ ಬಯಲು ರಂಗಮಂದಿರವನ್ನು ಒಂದೂವರೆ ತಿಂಗಳಿಗೆ ಬರೀ ₹50,000ಕ್ಕೆ ಬಾಡಿಗೆ ನೀಡಿರುವುದನ್ನು ವಿರೋಧಿಸಿ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು, ರಂಗಸಮುದ್ರ ಹಾಗೂ ಕನ್ನಡಪರ ವಿವಿಧ ಸಂಘಟನೆಗಳು ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದವು.

'ಸಾಹಿತ್ಯ ಸಂಸ್ಕೃತಿ ಉತ್ಸವಗಳಿಗೆ ಒಂದು ದಿನಕ್ಕೆ ₹5,000 ಬಾಡಿಗೆಯನ್ನು ಬಿಬಿಎಂಪಿ ಪಡೆಯುತ್ತದೆ. ಆದರೆ, ವಾಣಿಜ್ಯ ವ್ಯವಹಾರಕ್ಕೆ 45 ದಿನಗಳ ಅವಧಿಗೆ ಕಡಿಮೆ ಬಾಡಿಗೆ ನಿಗದಿಪಡಿಸಿರುವುದು ಅನುಮಾನಕ್ಕೂ ಎಡೆಮಾಡಿಕೊಟ್ಟಿದೆ' ಎಂದು ಕಸಾಪ ಅಧ್ಯಕ್ಷ ಹೊ.ಬೋ.ಪುಟ್ಟೇಗೌಡ ಆರೋ‍ಪಿಸಿದರು.

ಅಧಿಕಾರಿಗಳಿಗೆ ಹಣ ನೀಡಿ ವಾಣಿಜ್ಯ ಉದ್ದೇಶಕ್ಕೆ ಒಂದು ದಿನಕ್ಕೆ ₹700ರಿಂದ ₹900 ಬಾಡಿಗೆ ನಿಗದಿಪಡಿಸಿಕೊಂಡು ಬಿಬಿಎಂಪಿಗೆ ವಂಚಿಸಲಾಗುತ್ತಿದೆ. ಕಡಿಮೆ ಬಾಡಿಗೆಗೆ ನೀಡಿರುವ ಬಿಬಿಎಂಪಿ ಸಹಾಯಕ ಎಂಜಿನಿಯರ್ ಅಮಾನತುಗೊಳಿಸಬೇಕು. ಈ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ನವರಾತ್ರಿ ಉತ್ಸವ, ಶ್ರೀರಾಮೋತ್ಸವ, ಶಾಲಾಮಕ್ಕಳ ಸಾಂಸ್ಕೃತಿಕ ಉತ್ಸವ, ಅಣ್ಣಮ್ಮದೇವಿ ಕಾರ್ಯಕ್ರಮಗಳಿಗೆ ರಂಗಮಂದಿರ ಸಿಗದಂತಾಗಿದೆ. ಇದರಿಂದ ಸ್ಥಳೀಯ ಸಂಘ ಸಂಸ್ಥೆಗಳಿಗೆ ತೊಂದರೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಸ್ಥಳೀಯ ಸಂಘಸಂಸ್ಥೆಗಳ ಕಾರ್ಯಕ್ರಮಗಳಿಗೆ ಮೊದಲ ಆದ್ಯತೆ ನೀಡಲಾಗುವುದು’ ಎಂದು ಜಂಟಿ ಆಯುಕ್ತ ಡಾ.ಎಂ.ಎಚ್.ತಿಪ್ಪೇಸ್ವಾಮಿ ಭರವಸೆ ನೀಡಿದ ನಂತರ, ಪ್ರತಿಭಟನೆ ಹಿಂತೆಗೆದುಕೊಂಡರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry