ತಾಲಿಬಾನೀಯರ ಅಟ್ಟಹಾಸಕ್ಕೆ 43 ಸೈನಿಕರ ಬಲಿ

ಬುಧವಾರ, ಮೇ 22, 2019
29 °C

ತಾಲಿಬಾನೀಯರ ಅಟ್ಟಹಾಸಕ್ಕೆ 43 ಸೈನಿಕರ ಬಲಿ

Published:
Updated:
ತಾಲಿಬಾನೀಯರ ಅಟ್ಟಹಾಸಕ್ಕೆ 43 ಸೈನಿಕರ ಬಲಿ

ಕಾಬೂಲ್ : ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿನ ಸೇನಾ ಶಿಬಿರದ ಮೇಲೆ ತಾಲಿಬಾನ್‌ ಉಗ್ರರು ನಡೆಸಿದ ದಾಳಿಯಲ್ಲಿ ಸೇನಾ ಶಿಬಿರ ನಾಶವಾಗಿದ್ದು, ಅಫ್ಗಾನಿಸ್ತಾನದ ಕನಿಷ್ಠ 43 ಸೈನಿಕರು ಮೃತಪಟ್ಟಿದ್ದಾರೆ.

‘ಬುಧವಾರ ಎರಡು ಆತ್ಮಾಹುತಿ ಕಾರ್ ಬಾಂಬ್‌ಗಳು ಸ್ಫೋಟಗೊಂಡಿದ್ದು ಗಂಟೆಗಳ ಕಾಲ ಗುಂಡಿನ ಕಾಳಗ ನಡೆದಿದೆ. ಒಂಬತ್ತು ಸೈನಿಕರು ಗಾಯಗೊಂಡಿದ್ದಾರೆ. ಆರು ಸೈನಿಕರು ನಾಪತ್ತೆಯಾಗಿದ್ದಾರೆ. 10 ದಾಳಿಕೋರರನ್ನು ಹತ್ಯೆ ಮಾಡಲಾಗಿದೆ’ ಎಂದು ರಕ್ಷಣಾ ಸಚಿವಾಲಯದ ವಕ್ತಾರ ದವ್ಲತ್ ವಜಿರ್ ತಿಳಿಸಿದ್ದಾರೆ. ತಾಲಿಬಾನ್ ಸಂಘಟನೆಯು ಕೃತ್ಯದ ಹೊಣೆ ಹೊತ್ತಿದೆ.

ಇದಲ್ಲದೆ ಬಾಲ್ಖ್ ಪ್ರದೇಶದಲ್ಲಿ ಬುಧವಾರ ತಾಲಿಬಾನ್ ಸಂಘಟನೆ ನಡೆಸಿದ ದಾಳಿಯಲ್ಲಿ ಆರು ಪೊಲೀಸರು ಸಾವನ್ನಪ್ಪಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry