ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ದೀಪಾವಳಿ ಸಡಗರ

Last Updated 20 ಅಕ್ಟೋಬರ್ 2017, 5:30 IST
ಅಕ್ಷರ ಗಾತ್ರ

ಬೆಳಗಾವಿ: ನಗರ ಹಾಗೂ ಜಿಲ್ಲೆಯಾದ್ಯಂತ ದೀಪಾವಳಿಯನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಗುರುವಾರ ಎಲ್ಲೆಡೆ ದೀಪಗಳ ಹಬ್ಬ ದೀಪಾವಳಿಯನ್ನು ಭಕ್ತಿ, ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ನಿಮಿತ್ತ ಮಾರುಕಟ್ಟೆ ಜನ ದಟ್ಟಣೆಯಿಂದ ಕೂಡಿತ್ತು. ಬೆಲೆ ಏರಿಕೆಯ ನಡುವೆಯೂ ಹಬ್ಬ ಆಚರಿಸಿ ಸಂಭ್ರಮಿಸಿದರು.

ಮನೆ ಮಂದಿ ಹೊಸ ಬಟ್ಟೆ ಧರಿಸಿ, ಧನಲಕ್ಷ್ಮಿ ಪೂಜೆ ನೆರವೇರಿಸಿದರು. ಹಿರಿಯರ ಪೂಜೆ ಮಾಡಿ, ನಾನಾ ತರದ ಸಿಹಿ, ಹಣ್ಣು ನೈವೇದ್ಯ ಅರ್ಪಿಸಿ ಸಂತಸಪಟ್ಟರು. ನಗರದಲ್ಲಿ ಗುರುವಾರ ಬಹುತೇಕ ಅಂಗಡಿಗಳು, ಕಚೇರಿಗಳಲ್ಲಿ ಲಕ್ಷ್ಮಿ ಪೂಜೆ ಮಾಡುವುದು ಕಂಡು ಬಂದಿತು.

ಮಕ್ಕಳು ಮನೆಗಳ ಮುಂದೆ ತಾವೇ ಕೋಟೆಗಳನ್ನು ನಿರ್ಮಿಸಿ, ದೀಪಾಲಂಕಾರ ಮಾಡಿದರು. ಅಂಗಡಿ ಮುಂಗಟ್ಟುಗಳು, ಮನೆಗಳಲ್ಲಿ ಸಾಂಪ್ರದಾಯಕವಾಗಿ ಪೂಜೆ ನಡೆದವು.
ದೇವಸ್ಥಾನಗಳಲ್ಲಿ ಸಾಲುಗಟ್ಟಿದ ಭಕ್ತರು ದೇವರ ದರ್ಶನ ಪಡೆದರು. ಮನೆಗಳ ಮುಂದೆ ಸಾಲಂಕೃತ ದೀಪಗಳ ಸಿಂಗಾರ, ಝಗಮಗಿಸುವ ಬಣ್ಣಗಳ ಕಾರ್ತೀಕ ಬುಟ್ಟಿಗಳು ಆಕರ್ಷಿಸಿದವು. ಸಿಡಿಮದ್ದುಗಳ ಸದ್ದು ಮುಗಿಲುಮುಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT