ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿ ನಾಡಿನಲ್ಲಿ ದೀಪಾವಳಿ ಸಂಭ್ರಮ

Last Updated 20 ಅಕ್ಟೋಬರ್ 2017, 5:40 IST
ಅಕ್ಷರ ಗಾತ್ರ

ಸಂಡೂರು: ಪಟ್ಟಣದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಸಾಂಪ್ರದಾಯಿಕವಾಗಿ ಹಬ್ಬವನ್ನು ಆಚರಿಸಲು ಜನತೆ ಹೂ–ಹಣ್ಣು, ಬಾಳೆ ದಿಂಡು ಖರೀದಿಯಲ್ಲಿ ತೊಡಗಿದ್ದರು.

ಗಣಿಯ ಅಬ್ಬರ ಇದ್ದಾಗಿನ ಆರ್ಭಟ ಈಗಿಲ್ಲವಾದರೂ, ಸಾಂಪ್ರದಾಯಿಕವಾಗಿ ಹಬ್ಬ ಆಚರಿಸುವುದು ನಡೆದಿದೆ. ಪಟಾಕಿ ಖರೀದಿ ನಡೆದಿದೆಯಾದರು, ಅಷ್ಟೇನು ಹೆಚ್ಚಿಲ್ಲವೆನ್ನುತ್ತಾರೆ ಪಟಾಕಿ ಅಂಗಡಿ ಮಾಲೀಕ ಚೇತನ್.

ಇದಕ್ಕೆ ಇತ್ತೀಚೆಗಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಪಟಾಕಿ ಸುಡುವುದರಿಂದ ಆಗುವ ತೊಂದರೆಗಳು, ಪರಿಸರಕ್ಕೆ ಹಾನಿ, ಕೆಲವೆಡೆ ಪಟಾಕಿ ಸಿಡಿತದಿಂದ ಹಲವರು ಗಾಯಗೊಂಡಿರುವ ಘಟನೆಗಳನ್ನು ಮಾಧ್ಯಮಗಳ ಮೂಲಕ ತಿಳಿದು, ಪಾಲಕರುಮಕ್ಕಳಿಗೆ ಪಟಾಕಿಗಳನ್ನು ಕೊಡಿಸಲು ಹೆಚ್ಚಿನ ಆಸಕ್ತಿ ತೋರಿಸದಿರುವುದು ಕೆಲ ಮಟ್ಟಿಗೆ ಕಾರಣವಾಗಿದೆ.

ಕೆಲವರು ಪಟಾಕಿ ಸುಡುವುದು ದೀಪಾವಳಿ ಹಬ್ಬದ ಸಂಪ್ರದಾಯಗಳಲ್ಲಿ ಒಂದು ಎಂಬಂತೆ ಭಾವಿಸಿ, ಪಟಾಕಿಯನ್ನು ಖರೀದಿಸುತ್ತಿರುವುದು ಕೂಡ ಮಾರುಕಟ್ಟೆಯಲ್ಲಿ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT