ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಕ್ಷಗಾನ ಕಲೆ ಉಳಿಸುವುದಕ್ಕೆ ಯುವಕರು ಮುಂದಾಗಲಿ’

Last Updated 20 ಅಕ್ಟೋಬರ್ 2017, 7:25 IST
ಅಕ್ಷರ ಗಾತ್ರ

ಸಿದ್ದಾಪುರ: ‘ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದಕ್ಕೆ ಯುವ ಪೀಳಿಗೆ ಮುಂದಾಗಬೇಕು’ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು. ತಾಲ್ಲೂಕಿನ ದಂಟಕಲ್‌ನ ಯಕ್ಷಚಂದನ ಸಂಸ್ಥೆಯ ಆಶ್ರಯದಲ್ಲಿ ಗಾಳೀಜಡ್ಡಿಯ ಉಮಾಪತಿ ಹೆಗಡೆ ರಂಗಮಂದಿರದಲ್ಲಿ ಇತ್ತೀಚೆಗೆ ನಡೆದ 5ನೇ ವರ್ಷದ ಯಕ್ಷಗಾನ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಯಕ್ಷಗಾನ ಕಲೆಗೆ ಸಂಬಂಧಿಸಿದ ಅಕಾಡೆಮಿ ಈ ಹಿಂದೆ ‘ಯಕ್ಷಗಾನ ಬಯಲಾಟ ಅಕಾಡೆಮಿ’ ಎಂದಾಗಿತ್ತು. ಈಗ ಅದು ಯಕ್ಷಗಾನ ಅಕಾಡೆಮಿ ಮತ್ತು ಬಯಲಾಟ ಅಕಾಡೆಮಿ ಎಂದು ಪ್ರತ್ಯೇಕಗೊಂಡಿದೆ’ ಎಂದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸುಧೀರ ಗೌಡರ್, ಟಿಎಸ್ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ, ಸಾಮಾಜಿಕ ಕಾರ್ಯಕರ್ತ ಅಶೋಕ ಹೆಗಡೆ ಹಿರೇಕೈ, ಎಸ್‌ಡಿಎಂಸಿ ಅಧ್ಯಕ್ಷ ರಘುಪತಿ ಹೆಗಡೆ ಮಾತನಾಡಿದರು.ನರಹರಿ ಹೆಗಡೆ ಕರ್ಕಿಸವಲ್, ಶ್ರೀಕಾಂತ ಶಾನಭಾಗ ಉಪಸ್ಥಿತರಿದ್ದರು. ಸ್ತ್ರೀ ರೋಗ ತಜ್ಞ ಡಾ.ಕೆ. ಶ್ರೀಧರ ವೈದ್ಯ ಅಧ್ಯಕ್ಷತೆ ವಹಿಸಿದ್ದರು.

ಸುಜಾತಾ ಹೆಗಡೆ ದಂಟಕಲ್ ಸ್ವಾಗತಿಸಿದರು. ಭವ್ಯಾ ದತ್ತಾತ್ರೇಯ ಹೆಗಡೆ ಹುಕ್ಲಮಕ್ಕಿ ನಿರೂಪಿಸಿದರು. ಪ್ರತಿಭಾವಂತ ವಿದ್ಯಾರ್ಥಿನಿ ಪೂಜಾ ದತ್ತಾತ್ರೇಯ ಹೆಗಡೆ ಅವರಿಗೆ ₹ 5006/– ಹಮ್ಮಿಣಿ ನೀಡಿ, ಗೌರವಿಸಲಾಯಿತು.

ನಂತರ ಪ್ರದರ್ಶಿಸಿದ ‘ಭಕ್ತ ಸುಧನ್ವ’ ಯಕ್ಷಗಾನದ ಹಿಮ್ಮೇಳದಲ್ಲಿ ಸತೀಶ ಹೆಗಡೆ ದಂಟಕಲ್ ಮತ್ತು ನಂದನ ಹೆಗಡೆ ದಂಟಕಲ್ (ಭಾಗವತರು), ಶರತ್ ಹೆಗಡೆ ಜಾನಕೈ(ಮದ್ದಳೆವಾದಕರು), ಸತೀಶ ಉಪಾಧ್ಯಾಯ (ಚಂಡೆ ವಾದಕರು) ಭಾಗವಹಿಸಿದ್ದರು. ಮಾಣಿಕ್ಯ, ಮದನ್, ಶ್ರಾವಣಿ, ದಿಲೀಪ್, ಶರತ್, ಹರ್ಷಿತಾ, ರಕ್ಷಿತಾ, ಮಧುರಾ, ಗಣೇಶ, ಸುಹಾಸಿನಿ ಹೆಗಡೆ, ಶುಭಾ ರಮೇಶ, ನಿತಿನ್ ಹೆಗಡೆ ದಂಟಕಲ್, ಕಾರ್ತಿಕ ಹೆಗಡೆ, ಭಾಗ್ಯಲಕ್ಷ್ಮೀ, ಮೈತ್ರಿ ಸಂಪೇಸರ, ಸಹನಾ ಹೂಡೇಹದ್ದ, ಆಶ್ರಿತ್, ದಿನ್ಯಶ್ರೀ, ಧನುಶ್ರೀ, ಸುನೀಲ್, ಭರತ್ ವಿವಿಧ ಪಾತ್ರದಲ್ಲಿ ಹಾಗೂ ನೃತ್ಯದಲ್ಲಿ ಕಾಣಿಸಿಕೊಂಡರು. ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಯಕ್ಷ ಚಂದನ ಸಂಸ್ಥೆಯ ಕಾರ್ಯ ಶ್ಲಾಘನೀಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT