ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಾಕಿ ವ್ಯಾಪಾರದಲ್ಲಿ ಕುಸಿತ

Last Updated 20 ಅಕ್ಟೋಬರ್ 2017, 8:58 IST
ಅಕ್ಷರ ಗಾತ್ರ

ಮಂಗಳೂರು: ಎಲ್ಲೆಡೆಯೂ ದೀಪಾ ವಳಿಯ ಸಂಭ್ರಮ ಮನೆ ಮಾಡಿದೆ. ದೀಪಾವಳಿಯ ಪ್ರಮುಖ ಆಕರ್ಷಣೆ ಯಾಗಿರುವ ಪಟಾಕಿ, ಸಿಡಿಮದ್ದುಗಳ ವ್ಯಾಪಾರ ಮಾತ್ರ ಕುಸಿತ ಕಂಡಿದೆ. ಜಿಎಸ್‌ಟಿ, ಚೀನಾ ವಸ್ತುಗಳ ಬಹಿಷ್ಕಾರ ಹಾಗೂ ಶಾಲಾ–ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮದಿಂದಾಗಿ ಈ ವರ್ಷ ಪಟಾಕಿ ವ್ಯಾಪಾರ ಶೇ 30ರಷ್ಟು ಕಡಿಮೆಯಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ವ್ಯಾಪಾರದಲ್ಲಿ ಯಾವುದೇ ಲಾಭ ಉಳಿದಿಲ್ಲ. ಕೊಳ್ಳುವ ಜನರೂ ಕಡಿಮೆಯಾಗಿದ್ದಾರೆ. ಬೆಲೆ ಹೆಚ್ಚಾಗಿ ದ್ದರೂ, ಅಷ್ಟಿಷ್ಟು ಮಾತ್ರ ಖರೀದಿ ಆಗು ತ್ತಿದೆ. ಹೀಗಾಗಿ ಈ ಬಾರಿಯ ದೀಪಾವಳಿ ಮಾತ್ರ ಪಟಾಕಿ ವ್ಯಾಪಾರಿ ಗಳಿಗೆ ನೀರಸವಾಗಿದೆ.

‘ಈ ಮೊದಲು ಪಟಾಕಿಗೆ ಶೇ 14.5 ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಜಿಎಸ್‌ಟಿ ಜಾರಿಯ ನಂತರ ಪಟಾಕಿ ಮೇಲಿನ ತೆರಿಗೆ ದರ ಶೇ 28 ಕ್ಕೆ ಏರಿದೆ. ಹೀಗಾಗಿ ದುಬಾರಿ ಬೆಲೆ ತೆತ್ತು ಪಟಾಕಿ ಖರೀದಿಸುವುದಕ್ಕೆ ಜನರು ಆಸಕ್ತಿ ತೋರುತ್ತಿಲ್ಲ’ ಎನ್ನುತ್ತಾರೆ ಪಟಾಕಿ ವ್ಯಾಪಾರಿ ದಿನೇಶ್‌ ಭಂಡಾರ್ಕರ್‌.

‘ಜಿಎಸ್‌ಟಿ ಜತೆಗೆ ವಿಪರೀತ ಮಳೆ ಹಾಗೂ ಮಕ್ಕಳಲ್ಲಿ ಪಟಾಕಿ ಬಗೆಗಿನ ನಿರಾಸಕ್ತಿಯೂ ಈ ಬಾರಿ ಪಟಾಕಿ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಶಾಲಾ–ಕಾಲೇಜುಗಳಲ್ಲಿ ಮಕ್ಕಳಿಗೆ ಪಟಾಕಿ ಹಚ್ಚದಂತೆ ಜಾಗೃತಿ ಮೂಡಿಸಲಾಗುತ್ತಿದ್ದು, ಇದರಿಂದ ಶಾಲಾ– ಕಾಲೇಜುಗಳ ಬಹುತೇಕ ವಿದ್ಯಾರ್ಥಿಗಳು ಪಟಾಕಿ ಹಚ್ಚದೇ ಇರಲು ನಿರ್ಧರಿಸಿದ್ದಾರೆ’ ಎಂದು ಹೇಳುತ್ತಾರೆ.

‘ದೀಪಾವಳಿ ಸಂದರ್ಭದಲ್ಲಿ ಪಟಾಕಿ ಮಳಿಗೆಯಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿತ್ತು. ಈ ವರ್ಷ ಕೆಲವೇ ಕೆಲವು ಜನರು ಖರೀದಿಗೆ ಬರುತ್ತಿದ್ದಾರೆ. ಹೀಗಾಗಿ ಈ ವರ್ಷ ವ್ಯಾಪಾರ ಅಷ್ಟಕ್ಕಷ್ಟೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

‘ಚೀನಾ ವಸ್ತುಗಳ ಬಹಿಷ್ಕಾರದ ಕುರಿತು ಕಳೆದ ಕೆಲವು ತಿಂಗಳಿಂದ ಜಿಲ್ಲೆಯಲ್ಲಿ ವ್ಯಾಪಕ ಅಭಿಯಾನ ನಡೆಸಲಾಗುತ್ತಿದ್ದು, ಈ ವರ್ಷ ಚೀನಾದ ಪಟಾಕಿಗಳನ್ನು ಖರೀದಿಸಲು ಗ್ರಾಹಕರು ಸ್ಪಷ್ಟವಾಗಿ ನಿರಾಕರಿಸುತ್ತಿದ್ದಾರೆ. ಬಹುತೇಕ ಅಂಗಡಿಗಳಲ್ಲಿ ಚೀನಾದ ಪಟಾಕಿಗಳು ಮಾರಾಟವೇ ಆಗಿಲ್ಲ’ ಎನ್ನುತ್ತಾರೆ ಇಂಡಿಯನ್‌ ಕ್ರ್ಯಾಕರ್‌ ಆಂಡ್‌ ಫೈಯರ್‌ ವರ್ಕ್ಸ್‌ನ ಮೊಹಮ್ಮದ್‌ ಉಸ್ಮಾನ್‌.

ಚೀನಾದ ಪಟಾಕಿಗಳ ಬೆಲೆ ಕಡಿಮೆ ಇದೆ. ಅದಾಗ್ಯೂ ಈ ವರ್ಷ ಚೀನಾ ಪಟಾಕಿಗಳ ಖರೀದಿಗೆ ಜನರು ಮುಂದಾಗುತ್ತಿಲ್ಲ. ಭಾರತೀಯ ಪಟಾಕಿಗಳ ಬೆಲೆ ತುಸು ತುಟ್ಟಿಯಾ ದರೂ, ಅದನ್ನೇ ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ ಎನ್ನುವುದು ಅವರ ವಿವರಣೆ.

‘ಕಳೆದ ವರ್ಷ ಸುಮಾರು ₹10 ಲಕ್ಷ ಮೌಲ್ಯದ ಚೀನಾದ ಪಟಾಕಿಗಳನ್ನು ಮಾರಾಟ ಮಾಡಿದ್ದೆ. ಆದರೆ, ಈ ಬಾರಿ ಜನರು ನಿರಾಸಕ್ತಿಯನ್ನು ನೋಡಿ, ಕೇವಲ ಭಾರತೀಯ ಪಟಾಕಿಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದೇನೆ’ ಎಂದು ಹೇಳುತ್ತಾರೆ.

‘ಒಟ್ಟಾರೆ ಪಟಾಕಿ ವ್ಯಾಪಾರದಲ್ಲಿ ಅಂತಹ ಕುಸಿತವೇನೂ ಆಗಿಲ್ಲ. ಆದರೆ, ಜನರು ಚೀನಾದ ಪಟಾಕಿಗಳನ್ನು ತಿರಸ್ಕರಿಸುತ್ತಿರುವುದರಿಂದ ಚಿಲ್ಲರೆ ಪಟಾಕಿ ವ್ಯಾಪಾರದಲ್ಲಿ ಕುಸಿತವಾಗಿದೆ’ ಎಂದು ಮಾಯಾ ಟ್ರೇಡರ್ಸ್‌ನ ಅನಂತ ಕಾಮತ್‌ ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT