ಟಿಕೆಟ್ ಕೊಡಿಸಿದ್ದೇನೆ ಎನ್ನುವುದು ಹಾಸ್ಯಾಸ್ಪದ; ವಿಶ್ವನಾಥ್

ಶುಕ್ರವಾರ, ಮೇ 24, 2019
33 °C

ಟಿಕೆಟ್ ಕೊಡಿಸಿದ್ದೇನೆ ಎನ್ನುವುದು ಹಾಸ್ಯಾಸ್ಪದ; ವಿಶ್ವನಾಥ್

Published:
Updated:

ಕೆ.ಆರ್.ನಗರ: ‘ಹಿಂದಿನ ಚುನಾವಣೆಗಳಲ್ಲಿ ನನಗೆ ಟಿಕೆಟ್ ಕೊಡಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಿರಂಗ ಸಭೆಯಲ್ಲಿ ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ’ ಎಂದು ಜೆಡಿಎಸ್ ಮುಖಂಡ ಅಡಗೂರು ಎಚ್.ವಿಶ್ವನಾಥ್ ಹೇಳಿದರು. ಪಟ್ಟಣದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ನನ್ನೊಂದಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಬಂದಿದ್ದ ಮಾಜಿ ಶಾಸಕ ದಿ.ಮಂಚನಹಳ್ಳಿ ಮಹದೇವ್ ಅವರಿಗೆ ನೀಡಬೇಕಾಗಿದ್ದ ಟಿಕೆಟ್ ಅನ್ನು ಎಚ್.ವಿಶ್ವನಾಥ್ ಅವರಿಗೆ ನೀಡಲಾಯಿತು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಟ್ಟಣದಲ್ಲಿ ಈಚೆಗೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ನೀಡಿದ ಹೇಳಿಕೆಗೆ ಎಚ್.ವಿಶ್ವನಾಥ್ ಪ್ರತಿಕ್ರಿಯಿಸಿದರು.

‘ಪ್ರತಿಯೊಬ್ಬರ ರಾಜಕೀಯ ಭವಿಷ್ಯ ಜನತೆಯ ಕೈಯಲ್ಲಿ ಇರುತ್ತದೆ. ನಮ್ಮನ್ನು ಗೆಲ್ಲಿಸುವುದು, ಸೋಲಿಸುವುದು ಮತದಾರರ ನಿರ್ಧಾರವಾಗಿರುತ್ತದೆಯೇ ಹೊರತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದಲ್ಲ. ನನ್ನ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಯಾರು ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಗೆ ಕರೆತಂದದ್ದು ನಾನು. ಅಂತಹದರಲ್ಲಿ ನಾನೇ ಟಿಕೆಟ್ ಕೊಡಿಸಿದ್ದೇನೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ’ ಎಂದು ಹರಿಹಾಯ್ದರು.

‘ಶಾಸಕ ಕೆ.ವೆಂಕಟೇಶ್ ಅವರಿಗೂ ರಾಜಕೀಯವಾಗಿ ಬೆಳೆಯಲು ನಾನು ಸಾಕಷ್ಟು ಸಹಕಾರ ನೀಡಿದ್ದೇನೆ. ಆದರೆ ಅವರು ಕೂಡ ನನ್ನ ವಿರುದ್ಧವೇ ಮಾತನಾಡುತ್ತಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry