ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಿ’

Last Updated 20 ಅಕ್ಟೋಬರ್ 2017, 9:21 IST
ಅಕ್ಷರ ಗಾತ್ರ

ಕಸಬಾ (ಕನಕಪುರ): ಎನ್‌.ಎಸ್‌.ಎಸ್‌ ವಿದ್ಯಾರ್ಥಿಗಳು ಶ್ರಮದಾನದ ಮೂಲಕ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯ ನಡೆಸಿ ಪರಿಸರ ಉತ್ತಮಗೊಳಿಸಿದ್ದಾರೆ. ಗ್ರಾಮದ ಜನರು ಇದನ್ನು ಮುಂದುವರಿಸಿಕೊಂಡು ಹೋಗ ಬೇಕು ಆರ್‌.ಇ.ಎಸ್‌.ನ ಉಪಾಧ್ಯಕ್ಷ ಎಂ.ಎಲ್‌.ಶಿವಕುಮಾರ್‌ ಸಲಹೆ ನೀಡಿದರು.

ಕಸಬಾ ಹೋಬಳಿ ಆನಮಾನಹಳ್ಳಿ ಗ್ರಾಮದಲ್ಲಿ ಗ್ರಾಮಾಂತರ ವಿದ್ಯಾ ಪ್ರಚಾರಕ ಸಂಘದ ರೂರಲ್‌ಪದವಿ ಪೂರ್ವ ಕಾಲೇಜಿನ ಎನ್‌.ಎಸ್‌.ಎಸ್‌. ವಾರ್ಷಿಕ ಶಿಬಿರದ ಸಮಾರೋಪ ಸಮಾ ರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಎನ್‌.ಎಸ್‌.ಎಸ್‌.ವಿದ್ಯಾರ್ಥಿಗಳ ತಂಡ ಏಳು ದಿನಗಳ ಕಾಲ ಪರಿಸರ, ನೀರು, ಅರಣ್ಯ ಸಂರಕ್ಷಣೆ, ಶಿಕ್ಷಣದ ಅಗತ್ಯತೆ ಹಾಗೂ ಶೌಚಾಲಯ ನಿರ್ಮಾಣ ಮತ್ತು ಬಳಕೆ ಬಗ್ಗೆ ಅರಿವು ಮೂಡಿಸಿದ್ದಾರೆ ಎಂದು ಹೇಳಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿರಾಜು ಮಾತನಾಡಿ, ಸರ್ಕಾರದ ಸೌಲಭ್ಯ ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಶಾರದಮ್ಮ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಟೇಶ್‌, ಉಪಾಧ್ಯಕ್ಷೆ ರಾಣಿ, ಸದಸ್ಯರಾದ ಚಂದ್ರು, ಸುರೇಂದ್ರ, ಕಾಲೇಜಿನ ಪ್ರಾಂಶುಪಾಲ ಟಿ.ಆಂಜನಪ್ಪ, ಶಿಬಿರಾಧಿಕಾರಿ ಸಿ.ಆರ್‌.ರಾಜಣ್ಣ, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT