ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗೆ ಬಂದ ಮೊಸಳೆ ಮರಳಿ ನೀರಿಗೆ

Last Updated 20 ಅಕ್ಟೋಬರ್ 2017, 9:30 IST
ಅಕ್ಷರ ಗಾತ್ರ

ಹೊಸನಗರ: ಸಂತಾನ ಅಭಿವೃದ್ಧಿಗಾಗಿ ಶರಾವತಿ ಹಿನ್ನೀರಿನ ಪಟಗುಪ್ಪ ಹೊಳೆಯಿಂದ ಹಳ್ಳಿ ಕಡೆ ಮುಖ ಮಾಡಿದ್ದ ಮೊಸಳೆಯನ್ನು ತಾಲ್ಲೂಕಿನ ಜೇನಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭೀಮನಕೆರೆ ಗ್ರಾಮದಲ್ಲಿ ಬುಧವಾರ ಪುನಃ ನೀರಿಗೆ ಬಿಡಲಾಯಿತು.

ಮೊಸಳೆ ಹಳ್ಳಿಗೆ ಬಂದಿದೆ ಎಂದು ಗ್ರಾಮಸ್ಥರಿಂದ ದೂರವಾಣಿ ಕರೆ ಬಂದಿದ್ದರಿಂದ ವಲಯ ಅರಣ್ಯಾಧಿಕಾರಿ ಜಯೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದರು. ಗ್ರಾಮಸ್ಥರ ನೆರವಿನಿಂದ ಮೊಸಳೆಯನ್ನು ಪುನಃ ಶರಾವತಿ ಹಿನ್ನೀರಿನ ಪಟಗುಪ್ಪ ಹೊಳೆಗೆ ಮರಳಿ ಕಳುಹಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾದರು.

‘ಮೊಸಳೆಯು ಹೊಳೆ ದಂಡೆಯ ಮೇಲೆ ಮೊಟ್ಟೆ ಇಡಲು ಬಂದಿರಬಹುದು. ಆದರೆ, ದಾರಿ ತಪ್ಪಿ ಸುಮಾರು 1 ಕಿ.ಮೀ ದೂರದ ಹಳ್ಳಿಗೆ ಬರುವುದು ತೀರಾ ವಿರಳ’ ಎಂದು ವಲಯ ಅರಣ್ಯಾಧಿಕಾರಿ ಜಯೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಅಕ್ರಮ ಮರಳು ವಶ: ತಾಲ್ಲೂಕಿನ ಗವಟೂರು ಹೊಳೆಯಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದ ನವೀನ ಗೌಡ ಅವರ ಲಾರಿಯನ್ನು ಅರಣ್ಯ ಇಲಾಖೆಯು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT