‘ಸಚಿವ ಸ್ಥಾನ ಬದಲು ಸಕ್ಕರೆ ಕಾರ್ಖಾನೆ ಕೇಳಿದ್ದರು’

ಬುಧವಾರ, ಜೂನ್ 19, 2019
31 °C

‘ಸಚಿವ ಸ್ಥಾನ ಬದಲು ಸಕ್ಕರೆ ಕಾರ್ಖಾನೆ ಕೇಳಿದ್ದರು’

Published:
Updated:

ಸಿಂದಗಿ: ‘ನನಗೆ ಸಚಿವ ಸ್ಥಾನದ ಬದಲು ಮರಗೂರು ಸಕ್ಕರೆ ಕಾರ್ಖಾನೆ ಆರಂಭಿಸಿ ಎಂಬುದಾಗಿ ಮುಖ್ಯಮಂತ್ರಿಗಳನ್ನು ಕೇಳಿಕೊಂಡಿದ್ದರು. ಇದು ರೈತರ ಬಗ್ಗೆ ಅವರಲ್ಲಿರುವ ಕಾಳಜಿ ತೋರುತ್ತದೆ’ ಎಂದು ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ ಹೇಳಿದರು. ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಕಬ್ಬು ಬೆಳೆಗಾರರ ಸಭೆಯಲ್ಲಿ ಅವರು ಮಾತನಾಡಿದರು.

‘ಕಳೆದ 37 ವರ್ಷಗಳಿಂದ ‘ತೋಳ ಬಂತೆಲೆ ತೋಳ’ ಎಂಬ ಕತೆಯಂತೆ ಮರಗೂರ ಸಕ್ಕರೆ ಕಾರ್ಖಾನೆ ಸ್ಥಿತಿಯಾಗಿತ್ತು. ಆದರೆ ಶಾಸಕ ಯಶವಂತರಾಯಗೌಡರು ಅಲ್ವಾವಧಿಯಲ್ಲಿ ₹ 190 ಕೋಟಿ ಅನುದಾನ ಕ್ರೋಡೀಕರಿಸಿ ಇದೇ 24 ರಂದು ಮುಖ್ಯಮಂತ್ರಿಗಳಿಂದ ಕಾರ್ಖಾನೆಯನ್ನು ಲೋಕಾರ್ಪಣೆ ಮಾಡಿಸುತ್ತಿರುವುದು ಸಂತಸದ ವಿಷಯ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ‘ಮರಗೂರು ಸಕ್ಕರೆ ಕಾರ್ಖಾನೆ ರೈತರಿಗೆ ಸಮರ್ಪಣೆ ಮಾಡುವ ಮೂಲಕ ಶಾಸಕ ಯಶವಂತರಾಯಗೌಡ ನುಡಿದಂತೆ ನಡೆದಿದ್ದಾರೆ’ ಎಂದರು.

ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುಭಾಸ ಛಾಯಾಗೋಳ, ‘37 ವರ್ಷಗಳ ಕಾಲ ಜಿಲ್ಲೆಯ ಎರಡನೇ ಬಾರಾ ಕಮಾನ್ ಆಗಿ ನಿಂತಿದ್ದ ಮರಗೂರ ಕಾರ್ಖಾನೆ ತಲೆ ಎತ್ತಿ ನಿಲ್ಲುವಂತೆ ಮಾಡಿರುವ ಶಾಸಕ ಯಶವಂತರಾಯಗೌಡ ಕಾರ್ಯ ಮೆಚ್ಚವಂತದ್ದು’ ಎಂದು ಗುಣಗಾನ ಮಾಡಿದರು.

‘₹ 39 ಕೋಟಿ ಅನುದಾನವನ್ನು ಏಕಕಾಲಕ್ಕೆ ನೀಡಿದ ಹೆಗ್ಗಳಿಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ್ದು’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

‘ಬಹುತೇಕ ಸಹಕಾರಿ ಸಕ್ಕರೆ ಕಾರ್ಖಾನೆಗಳು ಹಾನಿಯನ್ನು ಎದುರಿಸುತ್ತಿವೆ. ಕಾರಣ ಅಲ್ಲಿರುವ ಪ್ರಾಮಾಣಿಕತೆಯ ಕೊರತೆ. ಈ ಕಾರ್ಖಾನೆ ಇಂಡಿ–ಸಿಂದಗಿ ತಾಲ್ಲೂಕಿನ ಎಲ್ಲ ರೈತರ ಆಸ್ತಿಯಾಗಿದೆ. ಅದರ ಏಳ್ಗೆ, ಹಿನ್ನೆಡೆ ನಿಮಗೆ ಬಿಟ್ಟಿದ್ದು’ ಎಂದು ಮನವಿ ಮಾಡಿಕೊಂಡರು.

ಪ್ರಮುಖರು ಗೈರು: ಆಹ್ವಾನವಿದ್ದರೂ ಸಿಂದಗಿ ಶಾಸಕ ರಮೇಶ ಭೂಸನೂರ, ಮಾಜಿ ಸಚಿವ ಎಂ.ಸಿ.ಮನಗೂಳಿ ಬಂದಿರಲಿಲ್ಲ. ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶ್ರೀಮಂತ ದುದ್ದಗಿ ಅವರನ್ನು ಕಡೆಗಣಿಸಲಾಗಿದೆ ಎಂಬ ಮಾತು ಕೇಳಿ ಬಂದಿತು. ಪಕ್ಷಾತೀತ ಸಭೆಯಾದರೂ ಬಿಜೆಪಿಯ ಮೂವರನ್ನು ಹೊರತುಪಡಿಸಿದರೆ ಜೆಡಿಎಸ್ ನಿಂದ ಯಾರೊಬ್ಬರೂ ಬಂದಿರಲಿಲ್ಲ.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಲ್ಲಣ್ಣ ಸಾಲಿ, ಅಶೋಕ ವಾರದ, ಭಾಗಪ್ಪಗೌಡ ಆಹೇರಿ, ಬಿ.ಎಚ್.ಬಿರಾದಾರ, ಶಿವಾನಂದ ಜಗತಿ ಮಾತನಾಡಿದರು. ಶಿಲ್ಪಾ ಕುದರಗೊಂಡ ಒಳಗೊಂಡು 26 ಜನರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry