ಸಾಮಾಜಿಕ ತಾಣದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿರುವುದು ಮೋದಿಯವರ ತಾಯಿ ಹೀರಾ ಬೆನ್ ಅಲ್ಲ!

ಬುಧವಾರ, ಜೂನ್ 26, 2019
28 °C

ಸಾಮಾಜಿಕ ತಾಣದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿರುವುದು ಮೋದಿಯವರ ತಾಯಿ ಹೀರಾ ಬೆನ್ ಅಲ್ಲ!

Published:
Updated:
ಸಾಮಾಜಿಕ ತಾಣದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿರುವುದು ಮೋದಿಯವರ ತಾಯಿ ಹೀರಾ ಬೆನ್ ಅಲ್ಲ!

ಅಹಮದಾಬಾದ್: 97ರ ಇಳಿವಯಸ್ಸಿನಲ್ಲಿ ಉತ್ಸಾಹ ನೋಡಿ, ಇವರು ಪ್ರಧಾನಿ ನರೇಂದ್ರ ಮೋದಿಯವರ ಅಮ್ಮ ಹೀರಾ ಬೆನ್. ತಮ್ಮ ಮನೆಯಲ್ಲಿ ದೀಪಾವಳಿ ಆಚರಿಸುತ್ತಿದ್ದಾರೆ ಎಂಬ ಅಡಿಬರಹದೊಂದಿಗೆ ಕಿರಣ್ ಬೇಡಿ ವಿಡಿಯೊವೊಂದನ್ನು ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದ್ದರು. ಆದರೆ ಆ ವಿಡಿಯೊದಲ್ಲಿರುವ ಮಹಿಳೆ ಹೀರಾ ಬೆನ್ ಅಲ್ಲ ಎಂದು ಗೊತ್ತಾದ ಕೂಡಲೇ ಕಿರಣ್ ತಮ್ಮ ತಪ್ಪು ತಿದ್ದಿಕೊಂಡಿದ್ದಾರೆ.

ನಾನು ತಪ್ಪು ಮಾಡಿದ್ದೇನೆ, ಆ ಅಮ್ಮನಿಗೆ ನನ್ನ ನಮನಗಳು. ನನಗೆ 96 ವಯಸ್ಸಾದಾಗ ನಾನೂ ಹಾಗಿರಬೇಕೆಂದು ಬಯಸುತ್ತೇನೆ ಎಂದು ಕಿರಣ್ ಬೇಡಿ ಹೇಳಿದ್ದಾರೆ.

ಪ್ರಧಾನಿ ಮೋದಿಯವರ ತಾಯಿ ಹೀರಾ ಬೆನ್ ಗುಜರಾತಿ ಜಾನಪದ ಗೀತೆಯೊಂದಕ್ಕೆ ಹೆಜ್ಜೆ ಹಾಕುತ್ತಿದ್ದಾರೆ ಎಂಬ ಅಡಿಬರಹದೊಂದಿಗೆ ವಿಡಿಯೊವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ ಈ ವಿಡಿಯೊವನ್ನೇ ಕಿರಣ್ ಬೇಡಿ ಟ್ವೀಟ್ ಮಾಡಿದ್ದು ಇದು 2,176 ಬಾರಿ ರಿಟ್ವೀಟ್ ಆಗಿದೆ.

ಒರಿಜಿನಲ್ ವಿಡಿಯೊ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry