ಬ್ರಿಟನ್ ಸಂಸತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಪ್ರಶಸ್ತಿ ಕೊಟ್ಟಿದ್ದು ನಿಜವೇ?

ಮಂಗಳವಾರ, ಜೂನ್ 18, 2019
24 °C

ಬ್ರಿಟನ್ ಸಂಸತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಪ್ರಶಸ್ತಿ ಕೊಟ್ಟಿದ್ದು ನಿಜವೇ?

Published:
Updated:
ಬ್ರಿಟನ್ ಸಂಸತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಪ್ರಶಸ್ತಿ ಕೊಟ್ಟಿದ್ದು ನಿಜವೇ?

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಬ್ರಿಟನ್ ಸಂಸತ್ತು  ಪ್ರತಿಷ್ಠಿತ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ ನೀಡಿದೆ ಎಂಬುದು ಸುದ್ದಿ. ಆದರೆ ಬ್ರಿಟನ್ ಸಂಸತ್ತು ಈ ಪ್ರಶಸ್ತಿಯನ್ನು ನೀಡಿಲ್ಲ. ಇತ್ತ ದರ್ಶನ್ ಅವರು ಲಂಡನ್‍ನಲ್ಲಿ ತಮ್ಮ ಗೆಳೆಯರೊಂದಿಗೆ ಮತ್ತು ಮಗ ವಿನೀಶ್ ಜತೆ ಇರುವ ಫೋಟೊಗಳನ್ನು ಟ್ವಿಟರ್‍‍ನಲ್ಲಿ ಹಂಚಿಕೊಂಡಿದ್ದಾರೆ. #DarshanInLondon ಎಂಬ ಹ್ಯಾಶ್‍ಟ್ಯಾಗ್‍ನೊಂದಿಗೆ ಈ ಫೋಟೊಗಳು ಟ್ವಿಟರ್‍‍ನಲ್ಲಿ ಟ್ರೆಂಡ್ ಆಗಿವೆ.

ಅಕ್ಟೋಬರ್ 19ರಂದು ಲಂಡನ್‌ ಸಂಸತ್ತಿನಲ್ಲಿ ನಡೆದ ಸಮಾರಂಭದಲ್ಲಿ ದರ್ಶನ್ ಪ್ರಶಸ್ತಿ ಸ್ವೀಕರಿಸುತ್ತಿರುವ ಫೋಟೊಗಳು ಮತ್ತು ಅವರ ಭಾಷಣದ ತುಣುಕುಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

ಅಂದ ಹಾಗೆ ದರ್ಶನ್‍ಗೆ ಸಿಕ್ಕಿದ್ದು ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ ಅಲ್ಲ. ಬ್ರಿಟನ್‍ನಲ್ಲಿರುವ ಹೌಸ್ ಆಫ್ ಕಾಮನ್ಸ್ ಸದಸ್ಯ ವೀರೇಂದ್ರ ಶರ್ಮಾ ಮತ್ತು ಇಂಡೊ ಬ್ರಿಟಿಷ್ ಆಲ್ ಪಾರ್ಲಿಮೆಂಟರಿ ಗ್ರೂಪ್ ದರ್ಶನ್‍ರನ್ನು ಲಂಡನ್‍ಗೆ ಆಹ್ವಾನಿಸಿತ್ತು. ವೀರೇಂದ್ರ ಶರ್ಮಾ ಅವರು ದರ್ಶನ್‍‌ಗೆ ಕಳುಹಿಸಿದ ಆಹ್ವಾನ ಪತ್ರಿಕೆ ಇಲ್ಲಿದೆ.


ಸೆಪ್ಟೆಂಬರ್ 19, 2017 ರಂದು ಕಳುಹಿಸಿರುವ ಈ ಪತ್ರದಲ್ಲಿ ಅಕ್ಟೋಬರ್ 19 ರಂದು ಸಂಸತ್ತಿಗೆ ಆಗಮಿಸಿ ಅಲ್ಲಿ ಆಹ್ವಾನಿತ ಅತಿಥಿಗಳೊಂದಿಗೆ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕೆಂದು ಶರ್ಮಾ ಅವರು ದರ್ಶನ್‍ರಲ್ಲಿ ವಿನಂತಿಸಿದ್ದಾರೆ. ಈ ಆಹ್ವಾನವನ್ನು ಸ್ವೀಕರಿಸಿ ದರ್ಶನ್‍ ಅವರು ಲಂಡನ್‍ಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್‍ ಅವರನ್ನು ಸನ್ಮಾನಿಸಿ ಗ್ಲೋಬಲ್ ಇಂಟೆಗ್ರಿಟಿ ಅವಾರ್ಡ್ ನೀಡಲಾಗಿದೆ. ಪ್ರಶಸ್ತಿ ಸ್ವೀಕರಿಸಿದ ದರ್ಶನ್ ಅದನ್ನು ತಮ್ಮ ಅಭಿಮಾನಿಗಳಿಗೆ ಅರ್ಪಿಸಿರುವುದಾಗಿ ಹೇಳಿದ್ದಾರೆ.

ಸಾಮಾಜಿಕ ತಾಣದಲ್ಲಿ ಅಭಿನಂದನೆಗಳ ಮಹಾಪೂರ

ದರ್ಶನ್ ಅವರಿಗೆ ಬ್ರಿಟನ್‍ ಸಂಸತ್ತಿನ  ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಸಾಮಾಜಿಕ ತಾಣಗಳಲ್ಲಿ ಅಭಿನಂದನೆಗಳ ಸುರಿಮಳೆಯಾಗಿದೆ.

ದರ್ಶನ್‍ಗೆ ಬ್ರಿಟನ್ ಸಂಸತ್ತು ಯಾವುದೇ ಪ್ರಶಸ್ತಿ ನೀಡಿಲ್ಲ
ಬ್ರಿಟನ್ ಸಂಸದ ವೀರೇಂದ್ರ ಶರ್ಮಾ ಅವರು ಬ್ರಿಟನ್ ಕನ್ನಡಿಗರ ಒತ್ತಾಯದ ಮೇರೆಗೆ ದರ್ಶನ್ ಅವರನ್ನು ಲಂಡನ್‍ಗೆ ಆಹ್ವಾನಿಸಿದ್ದರು. ವೀರೇಂದ್ರ ಅವರು ಖಾಸಗಿ ಕಾರ್ಯಕ್ರಮವೊಂದನ್ನು ಏರ್ಪಡಿಸಿ ಅಲ್ಲಿ ದರ್ಶನ್ ಅವರನ್ನು ಸನ್ಮಾನಿಸಿದ್ದಾರೆ. ‘ಅಕ್ಟೋಬರ್ 19ರಂದು ಲಂಡನ್‍ನಲ್ಲಿ ನಡೆದ ಕಾರ್ಯಕ್ರಮಕ್ಕೆ ನಾನೇ ದರ್ಶನ್ ತೂಗುದೀಪ ಅವರನ್ನು ಆಹ್ವಾನಿಸಿದ್ದೆ. ಇಲ್ಲಿನ ಸದಸ್ಯರು ಮತ್ತು ಕನ್ನಡಿಗರ ಮನವಿ ಮೇರೆಗೆ ದರ್ಶನ್ ಅವರನ್ನು ಬ್ರಿಟನ್ ಸಂಸತ್ತಿಗೆ ಆಹ್ವಾನಿಸಲಾಗಿತ್ತು. ಇದು ನನ್ನ ವೈಯಕ್ತಿಕ ಆಹ್ವಾನವಾಗಿತ್ತು ಎಂಬುದನ್ನು ನಾನು ಸ್ಪಷ್ಟಪಡಿಸುತ್ತಿದ್ದೇನೆ’ ಎಂದು ವೀರೇಂದ್ರ ಶರ್ಮಾ ಅವರು ‘ಪ್ರಜಾವಾಣಿ’ಗೆ ಇಮೇಲ್ ಮೂಲಕ ತಿಳಿಸಿದ್ದಾರೆ.


ಬ್ರಿಟನ್ ಸಂಸತ್ತಿಗೂ ಈ ಪ್ರಶಸ್ತಿಗೂ ಯಾವುದೇ ಸಂಬಂಧವಿಲ್ಲ
ದರ್ಶನ್‍ಗೆ ನೀಡಿರುವ ಗ್ಲೋಬಲ್ ಇಂಟೆಗ್ರಿಟಿ ಪ್ರಶಸ್ತಿಗೂ ಬ್ರಿಟನ್ ಸಂಸತ್ತಿಗೂ ಯಾವುದೇ ಸಂಬಂಧವಿಲ್ಲ. ಕೆಲವೊಂದು ಸುದ್ದಿ ಮಾಧ್ಯಮಗಳು ದರ್ಶನ್ ‍ ಅವರಿಗೆ ಬ್ರಿಟನ್ ಸಂಸತ್ತು ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ ನೀಡಲಾಗಿದೆ ಎಂದು ವರದಿ ಮಾಡಿದ್ದವು. ಆದರೆ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ ಮತ್ತು ಗ್ಲೋಬಲ್ ಇಂಟೆಗ್ರಿಟಿ ಪ್ರಶಸ್ತಿ ಒಂದೇ ಅಲ್ಲ. ಇವೆರಡೂ ಬೇರೆ ಬೇರೆ ಪ್ರಶಸ್ತಿಗಳು. ಈ ಹಿಂದೆ ಅಮಿತಾಬ್ ಬಚ್ಚನ್, ಐಶ್ವರ್ಯಾ  ರೈ ಬಚ್ಚನ್, ಜಾಕಿ ಚಾನ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಅಮೆರಿಕದ ನಾಗರಿಕ ಹಕ್ಕುಗಳ ಹೋರಾಟಗಾರ ಜೆಸ್ಸಿ ಜಾಕ್ಸನ್, ಫಾರ್ಮುಲಾ ಒನ್ ಚಾಲಕ ಲೆವಿಸ್ ಹ್ಯಾಮಿಲ್ಟನ್, ಬಾಲಿವುಡ್ ನಟ ಸಲ್ಮಾನ್ ಖಾನ್‍ಗೆ ಗ್ಲೋಬಲ್ ಡೈವರ್ಸಿಟಿ ಪ್ರಶಸ್ತಿ ಸಿಕ್ಕಿತ್ತು. ಆದರೆ ಲಂಡನ್‍ನಲ್ಲಿ ದರ್ಶನ್ ಅವರಿಗೆ ಪ್ರದಾನ ಮಾಡಲಾದ ಗ್ಲೋಬಲ್ ಇಂಟೆಗ್ರಿಟಿ ಪ್ರಶಸ್ತಿಗೂ ಬ್ರಿಟನ್ ಸಂಸತ್ತಿಗೂ ಯಾವುದೇ ಸಂಬಂಧ ಇಲ್ಲ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry