ನಾಯಿಯಿಂದ ಸಮರ್ಥ ಸಂವಹನ

ಸೋಮವಾರ, ಜೂನ್ 17, 2019
22 °C

ನಾಯಿಯಿಂದ ಸಮರ್ಥ ಸಂವಹನ

Published:
Updated:

ಲಂಡನ್‌ (ಪಿಟಿಐ): ಮನುಷ್ಯರು ತಮ್ಮತ್ತ ನೋಡುತ್ತಿದ್ದಾರೆ ಎಂಬುದು ಅರಿವಾದರೆ ನಾಯಿಗಳು ಹೆಚ್ಚು ಹೆಚ್ಚು ಭಾವನೆಗಳನ್ನು ಅಭಿವ್ಯಕ್ತಿಸುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

‘ಆಹಾರ ನೋಡಿದ ಮಾತ್ರಕ್ಕೇ ನಿಮ್ಮ ಮನೆಯ ಮುದ್ದಿನ ನಾಯಿಯ ಚಹರೆಯಲ್ಲಿ ಬದಲಾವಣೆ ಕಾಣುವುದಿಲ್ಲ. ಆದರೆ ಅದನ್ನು ನೀವು ಗಮನಿಸುತ್ತಿದ್ದೀರಿ ಎಂದು ತಿಳಿದರೆ ಅದು ಕಣ್ಣರಳಿಸಿ ನಿಮ್ಮತ್ತ ನೋಡುತ್ತದೆ. ನಿಮ್ಮ ಗಮನವನ್ನು ಮತ್ತಷ್ಟು ಸೆಳೆಯಲು ಪ್ರಯತ್ನಿಸುತ್ತದೆ. ಕೇವಲ ಸಂಗಾತಿಯನ್ನು ಕಂಡಾಗಷ್ಟೇ ಅದರ ವರ್ತನೆಯಲ್ಲಿ ಬದಲಾವಣೆ ಆಗುತ್ತದೆ ಎಂಬುದು ಸರಿಯಲ್ಲ’ ಎಂದು ಪೋರ್ಟ್ಸ್‌ಮೌತ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳಿದ್ದಾರೆ.

ಈ ತಂಡ ತಮ್ಮ ಅಧ್ಯಯನಕ್ಕೆ ಒಂದರಿಂದ 12 ವರ್ಷದೊಳಗಿನ ವಿವಿಧ ತಳಿಯ 24 ನಾಯಿಗಳನ್ನು ಬಳಸಿತ್ತು. ಅಧ್ಯಯನ ಸಂದರ್ಭದಲ್ಲಿನ ಸಂಪೂರ್ಣ ವಿಡಿಯೊ ಚಿತ್ರೀಕರಣ ಮಾಡಲಾಗಿದೆ. ನಾಯಿಗಳಲ್ಲಿ ಬದಲಾಗುವ ಮುಖ ಚಹರೆಗೆ ಅಧ್ಯಯನದುದ್ದಕ್ಕೂ ‘ಪಪ್ಪಿ ಡಾಗ್‌ ಐಸ್‌’ ಎಂದು ಕರೆಯಲಾಗಿದೆ.

‘ಮನುಷ್ಯರನ್ನು ಕಂಡಾಗ ನಾಯಿಗಳ ಮುಖದಲ್ಲಿ ಆಗುವ ಬದಲಾವಣೆ ಉದ್ದೇಶಪೂರ್ವಕ ಅಲ್ಲ. ಅದು ಉದ್ದೇಶಪೂರ್ವಕ ಎಂದೇ

ನಾದರೂ ತಿಳಿದಿದ್ದರೆ ಅದು ಅವರ ಭಾವನೆಗೆ ಬಿಟ್ಟ ವಿಚಾರ’ ಎಂದು ಈವರೆಗೆ ಭಾವಿಸಲಾಗಿತ್ತು.

‘ನಾಯಿಗಳು ನಮ್ಮೊಂದಿಗೆ ಸಮರ್ಥವಾಗಿ ಸಂವಹನ ನಡೆಸಬಲ್ಲವು ಎಂದು ನಾವೀಗ ವಿಶ್ವಾಸದಿಂದ ಹೇಳಬಹುದು’ ಎಂದು ತಂಡ ಹೇಳಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry