‘ಬೇರೆಯವರಿಗೆ ಮಾತನಾಡಲು ಬಿಡುವುದಿಲ್ಲ’

ಭಾನುವಾರ, ಜೂನ್ 16, 2019
30 °C

‘ಬೇರೆಯವರಿಗೆ ಮಾತನಾಡಲು ಬಿಡುವುದಿಲ್ಲ’

Published:
Updated:
‘ಬೇರೆಯವರಿಗೆ ಮಾತನಾಡಲು ಬಿಡುವುದಿಲ್ಲ’

ನವದೆಹಲಿ: ‘ಮಿತ್ರರೇ, ‘ಷಾ–ಜಾದಾ’ ಬಗ್ಗೆ ನಾನು ಮಾತನಾಡುವುದೂ ಇಲ್ಲ. ಬೇರೆಯವರು ಮಾತನಾಡಲು ಬಿಡುವುದೂ ಇಲ್ಲ’ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಅಧ್ಯಕ್ಷ ಅಮಿತ್‌  ಷಾ ಅವರ ಮಗ ಜಯ್ ಷಾ ಅವರ ಕಂಪೆನಿಯ ವಹಿವಾಟು 16,000 ಪಟ್ಟು ಹೆಚ್ಚಾಯಿತು ಎಂದು ದಿ ವೈರ್‌ ವರದಿ ಪ್ರಕಟಿಸಿತ್ತು. ಇದರ ವಿರುದ್ಧ ಜಯ್ ಷಾ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿ ಅಹಮದಾಬಾದ್ ನ್ಯಾಯಾಲಯವು ‘ಆ ವರದಿಗೆ ಸಂಬಂಧಿಸಿ ಬೇರೆ ಯಾವುದೇ ವರದಿ ಪ್ರಕಟಿಸಬೇಡಿ’ ಎಂದು ದಿ ವೈರ್‌ ಮೇಲೆ ಸೋಮವಾರ ನಿರ್ಬಂಧ ಹೇರಿತ್ತು.

ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿ ರಾಹುಲ್‌ ಈ ಟ್ವೀಟ್ ಮಾಡಿದ್ದಾರೆ. ನ್ಯಾಯಾಲಯದ ಈ ಆದೇಶವನ್ನು ಪ್ರಕಟಿಸಿರುವ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆಯ ವರದಿಯನ್ನು ರಾಹುಲ್ ತಮ್ಮ ಟ್ವೀಟ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.

ಇದಕ್ಕೂ ಮುನ್ನ ರಾಹುಲ್ ‘ಷಾ–ಜಾದಾರವರ ಕಾನೂನು ನೆರವಿಗೆ ನಿಂತ ಸರ್ಕಾರ. ವೈ ದಿಸ್, ವೈ ದಿಸ್ ಕೊಲವರಿ ಡಿ?’ ಎಂದು ಟ್ವೀಟ್ ಮಾಡಿದ್ದರು. ಜಾದಾ ಎಂಬ ಪದವನ್ನು ದೊರೆಯ ಮಗ ಎಂಬರ್ಥದಲ್ಲಿ ಬಳಸಲಾಗುತ್ತದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry