ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

500 ರೈಲುಗಳ ಪ್ರಯಾಣ ಅವಧಿ ಕಡಿತ

Last Updated 20 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ದೂರ ಪ್ರಯಾಣದ ಸುಮಾರು 500 ರೈಲುಗಳ ಪ್ರಯಾಣದ ಅವಧಿಯನ್ನು ಗರಿಷ್ಠ 2 ಗಂಟೆಗಳವರೆಗೆ ಕಡಿತ ಮಾಡಲು ರೈಲ್ವೆ ಇಲಾಖೆ ಯೋಜನೆ ಸಿದ್ಧಪಡಿಸಿದೆ. ನವೆಂಬರ್ ಆರಂಭದಿಂದ ಈ ಯೋಜನೆ ಮತ್ತು ಹೊಸ ವೇಳಾಪಟ್ಟಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ.

ಅತ್ಯಂತ ಕಡಿಮೆ ಪ್ರಯಾಣಿಕರು ಇರುವ ರೈಲು ನಿಲ್ದಾಣಗಳಲ್ಲಿ ಇಂತಹ ರೈಲುಗಳ ನಿಲುಗಡೆಯನ್ನು ರದ್ದುಪಡಿಸಲಾಗುತ್ತದೆ. ಜತೆಗೆ ಎಲ್ಲಾ ರೈಲು ನಿಲ್ದಾಣಗಳಲ್ಲಿ ನಿಲುಗಡೆಯ ಸಮಯವನ್ನು ಕಡಿಮೆ ಮಾಡಲಾಗುತ್ತದೆ. ಅಲ್ಲದೆ ಹಲವು ರೈಲುಗಳ ಗರಿಷ್ಠ ಮತ್ತು ಸರಾಸರಿ ವೇಗವನ್ನು ಹೆಚ್ಚಿಸಲಾಗುತ್ತದೆ. ಇದರಿಂದ 500 ರೈಲುಗಳ ಪ್ರಯಾಣದ ಅವಧಿಯಲ್ಲಿ ಕನಿಷ್ಠ 15 ನಿಮಿಷದಿಂದ 2 ಗಂಟೆವರೆಗೆ ಕಡಿತವಾಗಲಿದೆ. ಹಳಿಗಳನ್ನು ಮೇಲ್ದರ್ಜೆಗೆ ಏರಿಸುವುದು ಮತ್ತು ಸ್ವಯಂಚಾಲಿತ ಸೂಚನಾ ವ್ಯವಸ್ಥೆಯ ಅಳವಡಿಕೆಯಿಂದ ವೇಗದ ಏರಿಕೆ ಸಾಧ್ಯವಾಗುತ್ತದೆ ಎಂದು ರೈಲ್ವೆ ಸಚಿವ ಪೀಯೂಷ್ ಗೋಯಲ್ ಮಾಹಿತಿ ನೀಡಿದ್ದಾರೆ.

ಇದರ ಜತೆಯಲ್ಲೇ ರೈಲುಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. ದೂರ ಪ್ರಯಾಣದ ರೈಲುಗಳು ಕೊನೆಯ ನಿಲ್ದಾಣ ತಲುಪಿದ ನಂತರ ಮತ್ತೆ ಪ್ರಯಾಣ ಆರಂಭಿಸುವ ಮುನ್ನ ಹಲವು ಗಂಟೆಗಳ ಕಾಲ ಸುಮ್ಮನೇ ನಿಂತಿರುತ್ತವೆ. ಈ ಅವಧಿಯಲ್ಲಿ ಅವನ್ನು ಕಡಿಮೆ ಅಂತರದ ಮಾರ್ಗಗಳಲ್ಲಿ ಓಡಿಸಲಾಗುತ್ತದೆ. ಕೆಲವು ರೈಲುಗಳ ಮಾರ್ಗಗಳನ್ನು ವಿಸ್ತರಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT