ಪ್ರೊ ಕಬಡ್ಡಿ: ವಾರಿಯರ್ಸ್‌–ಟೈಟನ್ಸ್ ಪಂದ್ಯ ಟೈ

ಮಂಗಳವಾರ, ಜೂನ್ 25, 2019
29 °C

ಪ್ರೊ ಕಬಡ್ಡಿ: ವಾರಿಯರ್ಸ್‌–ಟೈಟನ್ಸ್ ಪಂದ್ಯ ಟೈ

Published:
Updated:
ಪ್ರೊ ಕಬಡ್ಡಿ: ವಾರಿಯರ್ಸ್‌–ಟೈಟನ್ಸ್ ಪಂದ್ಯ ಟೈ

ಪುಣೆ (ಪಿಟಿಐ): ಪ್ರೊ ಕಬಡ್ಡಿ ಲೀಗ್ ಹಂತದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದ ತೆಲುಗು ಟೈಟನ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಗಳು ಟೈ ಮಾಡಿಕೊಂಡಿವೆ. ಎರಡೂ ತಂಡಗಳು 37–37 ಪಾಯಿಂಟ್ಸ್‌ಗಳಲ್ಲಿ ಸಮಬಲ ಸಾಧಿಸಿದವು.

ಮೊದಲರ್ಧಕ್ಕೆ 20–17ರಲ್ಲಿ ಮುಂದಿದ್ದ ವಾರಿಯರ್ಸ್ ದ್ವಿತೀಯಾರ್ಧಲ್ಲಿ ಪಾಯಿಂಟ್ಸ್‌ಗಳನ್ನು ಕೈಚೆಲ್ಲಿತು. ಈಗಾಗಲೇ ಪ್ಲೇ ಆಫ್‌ ತಲುಪಿರುವ ವಾರಿಯರ್ಸ್ ‘ಬಿ’ ವಲಯದ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿತು.

ರಾಹುಲ್‌ ಚೌಧರಿ ಬಳಗವು ಉತ್ತಮ ಆಟವಾಡಿತು. ನಾಯಕ ರಾಹುಲ್ ಐದು ಪಾಯಿಂಟ್ಸ್ ಕಲೆಹಾಕಿದರೆ, ಯಳಂಗೇಶ್ವರನ್‌ ಆರು, ಮೊಹಸೀನ್‌ ಮೂರು, ನಿಲೇಶ್ ಸಾಳುಂಕೆ ಏಳು, ವಿಶಾಲ್ ಭಾರದ್ವಾಜ್‌ ನಾಲ್ಕು ಪಾಯಿಂಟ್ಸ್ ತಂದರು. ವಾರಿಯರ್ಸ್ ತಂಡದಲ್ಲಿ ಜಾನ್ ಕುನ್ ಲೀ ಮಿಂಚಿದರು. ರಾನ್ ಸಿಂಗ್ ನಾಲ್ಕು, ದೀಪಕ್‌ ನರ್ವಾಲ್‌ ಐದು, ಸುರ್ಜೀತ್ ಸಿಂಗ್ ಐದು, ರವೀಂದ್ರ ಎರಡು ಪಾಯಿಂಟ್ಸ್ ಕಲೆಹಾಕಿದರು.

ರೈಡಿಂಗ್‌ನಲ್ಲಿ ತೆಲುಗು ಟೈಟನ್ಸ್ 21 ಪಾಯಿಂಟ್ಸ್ ಗಳಿಸಿದರೆ, ವಾರಿಯರ್ಸ್ 20 ಪಾಯಿಂಟ್ಸ್ ಪಡೆಯಿತು. ಟ್ಯಾಕಲ್‌ನಲ್ಲಿ ಎರಡೂ ತಂಡಗಳು ಕ್ರಮವಾಗಿ 11 ಮತ್ತು 8 ಪಾಯಿಂಟ್ಸ್‌ ಗಳಿಸಿದವು. ಆಲ್‌ಔಟ್‌ನಲ್ಲಿ ಎರಡೂ ತಂಡಗಳು ತಲಾ ನಾಲ್ಕು ಪಾಯಿಂಟ್ಸ್ ಗಿಟ್ಟಿಸಿದವು. ಬೋನಸ್‌ ಪಾಯಿಂಟ್ಸ್ ಪಡೆಯುವುದರಲ್ಲಿ ವಾರಿಯರ್ಸ್ ಮುಂಚೂಣಿ ಸಾಧಿಸಿದೆ. ಈ ತಂಡ ಐದು ಪಾಯಿಂಟ್ಸ್ ಪಡೆದರೆ, ಟೈಟನ್ಸ್ ಒಂದು ಪಾಯಿಂಟ್ಸ್ ಗಿಟ್ಟಿಸಿತು.

ಫಾರ್ಚೂನ್‌ಜೈಂಟ್ಸ್‌ಗೆ ಜಯ: ಕನ್ನಡಿಗ ಸುಕೇಶ್ ಹೆಗಡೆ ಸಾರಥ್ಯದ ಗುಜರಾತ್ ತಂಡ 23–22ರಲ್ಲಿ ಒಂದು ಪಾಯಿಂಟ್ ಅಂತರದಲ್ಲಿ ಪುಣೇರಿ ಪಲ್ಟನ್ ಎದುರು ಜಯಭೇರಿ ದಾಖಲಿಸಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry