ಭಾನುವಾರ, ಸೆಪ್ಟೆಂಬರ್ 22, 2019
22 °C

ಹೊಸಪೇಟೆ ತಾಲ್ಲೂಕು ಪಾಪಿನಾಯಕನಹಳ್ಳಿ ಬಳಿ ಬೆಳಿಗ್ಗೆ ಕಾರು–ಲಾರಿ ಡಿಕ್ಕಿ: ಸ್ಥಳದಲ್ಲೆ ನಾಲ್ವರು ಸಾವು

Published:
Updated:
ಹೊಸಪೇಟೆ ತಾಲ್ಲೂಕು ಪಾಪಿನಾಯಕನಹಳ್ಳಿ ಬಳಿ ಬೆಳಿಗ್ಗೆ ಕಾರು–ಲಾರಿ ಡಿಕ್ಕಿ: ಸ್ಥಳದಲ್ಲೆ ನಾಲ್ವರು ಸಾವು

ಹೊಸಪೇಟೆ: ತಾಲ್ಲೂಕಿನ ಪಾಪಿನಾಯಕನಹಳ್ಳಿ ಸಮೀಪ ಕಾರು ಮತ್ತು ಲಾರಿ ನಡುವೆ ಶನಿವಾರ ಬೆಳಿಗ್ಗೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೆ ನಾಲ್ವರು ಮೃತಪಟ್ಟಿದ್ದಾರೆ.

ಚಾಲಕ ಶ್ರೀನಿವಾಸ್‌(46), ವೆಂಕಟಮ್ಮ(46), ನಳಿನಿ(30) ಎಂಬುವರು ಮೃತಪಟ್ಟಿದ್ದಾರೆ. ಮೃತರ ಪೈಕಿ ಇನ್ನೊಬ್ಬರ ಹೆಸರು ಗೊತ್ತಾಗಿಲ್ಲ.

ಚಿತ್ರದುರ್ಗ ಜಿಲ್ಲೆ ಹಿರಿಯೂರಿನವರಾದ ಇವರು ಹೊಸಪೇಟೆಯಲ್ಲಿ ಸಂಬಂಧಿಕರೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದರು ಎನ್ನಲಾಗಿದೆ.

ಇಬ್ಬರು ಮಕ್ಕಳು ಸೇರಿದಂತೆ ಐವರು ಗಾಯಾಳುಗಳನ್ನು ಹೊಸಪೇಟೆ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಇಲ್ಲಿನ ಆಸ್ಪತ್ರೆ ವೈದ್ಯರು ದೀಪಾವಳಿಗೆ ರಜೆ ತೆರಳಿದ್ದರಿಂದ ಗಾಯಾಳುಗಳನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

Post Comments (+)