ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆದ ಎಮ್ಮೆಗಳ ಮೆರವಣಿಗೆ

Last Updated 21 ಅಕ್ಟೋಬರ್ 2017, 5:25 IST
ಅಕ್ಷರ ಗಾತ್ರ

ಬೆಳಗಾವಿ: ದೀಪಾವಳಿ ಹಬ್ಬದ ಸಡಗರದಲ್ಲಿ ಶುಕ್ರವಾರ ನಗರದ ಕೆಲವು ಬೀದಿಗಳಲ್ಲಿ ‘ಎಮ್ಮೆಗಳ ಕ್ಯಾಟ್‌ವಾಕ್‌’ ನಡೆಯಿತು. ದೀಪಾವಳಿ ಹಬ್ಬದ ಕೊನೆಯ ಸಂದರ್ಭದಲ್ಲಿ, ಪಾಡವಾ ದಿನದಂದು ಸಾಮಾನ್ಯವಾಗಿ ರೈತರು, ಗವಳಿ ಸಮಾಜದವರು, ವೃತ್ತಿಪರ ಎಮ್ಮೆ ಸಾಕುವವರು ಲಕ್ಷ್ಮಿ ಪೂಜೆಯ ಜತೆಗೆ ಎಮ್ಮೆಗಳನ್ನೂ ಪೂಜಿಸಿ, ಪ್ರದರ್ಶನ ನಡೆಸಿದರು. ಮಾಲೀಕನ ಧ್ವನಿ ಬೆನ್ನತ್ತಿ ಬರುವ ಎಮ್ಮೆ, ಕರುಗಳು ಭಾಗವಹಿಸಿದ್ದವು. ಎಮ್ಮೆಗಳನ್ನು ಯಾರು ಎಷ್ಟು ಪಳಗಿಸಿದ್ದಾರೆ ಎನ್ನುವುದರ ಪ್ರದರ್ಶನ ಆಕರ್ಷಕವಾಗಿತ್ತು. ಸದೃಢ ಹಾಗೂ ಅತ್ಯುತ್ತಮವಾಗಿ ಮೇಯ್ದು, ಪಳಗಿದ ಎಮ್ಮೆಗಳಿಗೆ ವಿಶೇಷ ಬಹುಮಾನ ಕೊಡಲಾಯಿತು.

ಆಕರ್ಷಕ ಅಲಂಕಾರ: ಕೊರಳಲ್ಲಿ ಗಂಟೆ, ಕೋಡಿಗೆ ಬಣ್ಣ ಮತ್ತು ಅವುಗಳ ತುದಿಗೆ ನವಿಲು ಗರಿ, ಕಾಲಿಗೆ ಗೆಜ್ಜೆ, ಮುಖಕ್ಕೆ ಕವಡೆ ಸರ, ಮೈಮೇಲೆ ಗುಲಾಲ...ಹೀಗೆ ಎಮ್ಮೆ ಮತ್ತು ಕರುಗಳನ್ನು ಅಲಂಕಾರ ಮಾಡಲಾಗಿತ್ತು.

ಕೆಲವರು ಎಮ್ಮೆಗಳ ಕೊರಳಲ್ಲಿ ಚಿನ್ನದ ಸರ, ಗುಂಡಿನ ಸರ, ಬೋರಮಾಳ ಸರ, ಕಡಗಗಳನ್ನೂ ಹಾಕಿದ್ದರು. ಮತ್ತೆ ಕೆಲವರು ಬೆಳ್ಳಿ ಸರಪಳಿ, ಬೆಳ್ಳಿ ಪಟ್ಟಿ ಹೀಗೆ ನಾನಾ ತರದ ಚಿನ್ನಾಭರಣಗಳನ್ನೂ ಧರಿಸಿದ ಎಮ್ಮೆಗಳ ಪ್ರದರ್ಶನ ಹಬ್ಬಕ್ಕೆ ಮೆರಗು ನೀಡಿತು.

ಪಳಗಿದ ಎಮ್ಮೆಗಳು: ಜನದಟ್ಟಣೆಯಲ್ಲಿ ಯಾರಿಗೂ ತೊಂದರೆಯಾದಂತೆ ಓಡಾಡಿದ ಎಮ್ಮೆ, ಕರುಗಳು ಸಾರ್ವಜನಿಕರ ಗಮನಸೆಳೆದವು.

ಎಲ್ಲೆಲ್ಲಿ ಪ್ರದರ್ಶನ?: ಬೆಳಗಾವಿಯಲ್ಲಿ ಮುಖ್ಯ ಪ್ರದರ್ಶನ ನಗರದ ಸರದಾರ್‌ ಹೈಸ್ಕೂಲ್‌ ಮೈದಾನದಲ್ಲಿ ನಡೆಯಿತು. ಇನ್ನುಳಿದಂತೆ ಕ್ಯಾಂಪ್‌ ಪ್ರದೇಶ, ಶಹಾಪುರ, ಕಣಬರಗಿ, ಹಿಂಡಲಗಾ ಭಾಗದಲ್ಲಿ ಪ್ರತ್ಯೇಕವಾಗಿ ಎಮ್ಮೆಗಳ ಪ್ರದರ್ಶನ ನಡೆಸಲಾಯಿತು. ಗವಳಿ ಗಲ್ಲಿ, ಕೊನವಾಳ ಗಲ್ಲಿ, ಕಂಗ್ರಾಳ ಗಲ್ಲಿ, ಕಾಕತಿವೇಸ್‌, ಶನಿವಾರ ಕೂಟ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಎಮ್ಮೆಗಳ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT