ಯೋಧರಿಗಾಗಿ ವಿಶೇಷ ಸಂದೇಶ ರವಾನಿಸಿದ ಗಾಯಕಿ ಲತಾ ಮಂಗೇಶ್ಕರ್‌

ಭಾನುವಾರ, ಜೂನ್ 16, 2019
22 °C

ಯೋಧರಿಗಾಗಿ ವಿಶೇಷ ಸಂದೇಶ ರವಾನಿಸಿದ ಗಾಯಕಿ ಲತಾ ಮಂಗೇಶ್ಕರ್‌

Published:
Updated:
ಯೋಧರಿಗಾಗಿ ವಿಶೇಷ ಸಂದೇಶ ರವಾನಿಸಿದ ಗಾಯಕಿ ಲತಾ ಮಂಗೇಶ್ಕರ್‌

ಮುಂಬೈ: ದೀಪಾವಳಿ ಹಬ್ಬದ ಪ್ರಯುಕ್ತ ದೇಶ ಕಾಯುವ ಯೋಧರಿಗಾಗಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ವಿಶೇಷ ವಿಡಿಯೊ ಸಂದೇಶವನ್ನು ಶುಕ್ರವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೊದಲ್ಲಿ ಭಾರತೀಯ ಯೋಧರಿಗೆ ಶುಭ ಕೋರಿದ್ದು, ‘ಭಾರತೀಯ ಸೇನಾ ಯೋಧರಿಗೆ ನಾನು ಸೆಲ್ಯೂಟ್‌ ಮಾಡುತ್ತೇನೆ. ನಾನು ನಿಮ್ಮ ಸಹೋದರಿಯಾಗಿದ್ದು, ನಿಮ್ಮನ್ನು ನಾನು ಸದಾ ಗೌರವಿಸುತ್ತೇನೆ. ನಮ್ಮ ದೇಶ ಇರುವುದು ಯೋಧರಿಂದ’ ಎಂದು ತಿಳಿಸಿದ್ದಾರೆ.

88 ವರ್ಷ ವಯಸ್ಸಿನ ಹಿರಿಯ ಗಾಯಕಿ ಲತಾ ಮಂಗೇಶ್ಕರ್‌ ವೃತ್ತಿ ಜೀವನದಲ್ಲಿ ಹಲವು ರಾಷ್ಟ್ರಭಕ್ತಿ ಗೀತೆಗಳನ್ನು ಹಾಡಿದ್ದಾರೆ. ಜತೆಗೆ, ದೇಶದ ಯೋಧರಿಗಾಗಿ ಯಾವುದೆ ಸಹಾಯ ಮಾಡಲು ಸದಾ ಸಿದ್ಧರಿರುವುದಾಗಿ ಹೇಳಿದ್ದಾರೆ.

ಕಳೆದ ವರ್ಷ ಲತಾ ಮಂಗೇಶ್ಕರ್‌ ಅವರು ತಮ್ಮ ಹುಟ್ಟುಹಬ್ಬವನ್ನು ಯೋಧರಿಗೆ ಅರ್ಪಿಸುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಜತೆಗೆ,  ಭಾರತೀಯ ಯೋಧರ ಕಲ್ಯಾಣ ನಿಧಿಗೆ ದೇಣಿಗೆ ನೀಡುವಂತೆಯೂ ಮನವಿ ಮಾಡಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry