ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆ ದಿನ ಜನವೋ ಜನ..

Last Updated 21 ಅಕ್ಟೋಬರ್ 2017, 6:45 IST
ಅಕ್ಷರ ಗಾತ್ರ

ಹಾಸನ: ಶಕ್ತಿದೇವತೆ ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನಕ್ಕೆ ಕೊನೆ ದಿನ ಶುಕ್ರವಾರ ಸಾಗರೋಪಾದಿಯಲ್ಲಿ ಬಂದು ದರುಶನ ಪಡೆದರು. ಎಂಟು ದಿನಗಳಿಂದ ಲಕ್ಷಾಂತರ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಿದ್ದಾಳೆ.

ದೀಪಾವಳಿ ರಜೆಯಾದ್ದರಿಂದ ಬೆಳಿಗ್ಗೆಯಿಂದಲೇ ಸಹಸ್ರಾರು ಭಕ್ತರು ದೇವಾಲಯ ಮುಂಭಾಗ ಸಾಲುಗಟ್ಟಿ ನಿಂತಿದ್ದರು. ಉಚಿತ ಪ್ರವೇಶ ಸಾಲು ಎರಡು ಕಿ.ಮೀ. ವರೆಗೂ ಕಂಡು ಬಂತು. ₹ 300, ₹1,000 ಬೆಲೆಯ ಟಿಕೆಟ್‌ ಪಡೆದು ದರ್ಶನ ಮಾಡುವ ಸಾಲಿನಲ್ಲೂ ಸಾಕಷ್ಟು ಭಕ್ತರಿದ್ದರು. ದರ್ಶನದ ವೇಳೆ ನೂಕುನುಗ್ಗಲು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಬೆಳಿಗ್ಗೆ 5 ರಿಂದ ಸಂಜೆ 5 ಹಾಗೂ ರಾತ್ರಿ 9 ರಿಂದ ಶನಿವಾರ ಬೆಳಿಗ್ಗೆ 6ರ ವರೆಗೆ ದರ್ಶನಕ್ಕೆ ಅವಕಾಶವಿತ್ತು. ಸುದ್ದಿಗಾರರೊಂದಿಗೆ ಮಾತನಾಡಿದ ಅನಿತಾ ಕುಮಾರಸ್ವಾಮಿ, ‘ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವ ಬಗ್ಗೆ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರು ನಿರ್ಧಾರ ಕೈಗೊಳ್ಳುತ್ತಾರೆ.

ಸ್ವಲ್ಪ ದಿನ ಕಾದು ನೋಡಿ ಎಲ್ಲಾ ಕುತೂಹಲಕ್ಕೆ ತೆರೆ ಬೀಳಲಿದೆ. ಪತಿ ಕುಮಾರಸ್ವಾಮಿಗೆ ಅನಾರೋಗ್ಯದ ಕಾರಣ ಪುತ್ರ ನಿಖಿಲ್ ಕೆಲವು ದಿನ ತಂದೆ, ಪಕ್ಷದ ಪರವಾಗಿ ಪ್ರಚಾರ ಮಾಡಲಿದ್ದಾರೆ’ ಎಂದು ತಿಳಿಸಿದರು.

ವಿಶೇಷ ಟಿಕೆಟ್ ಮಾರಾಟದಿಂದ ₹ 1.8 ಕೋಟಿ ಸಂಗ್ರಹವಾಗಿದೆ. ಶುಕ್ರವಾರ ₹ 300, ಒಂದು ಸಾವಿರ ಬೆಲೆಯ ಟಿಕೆಟ್‌ ಮಾರಾಟವಾಗಿದ್ದು, ಆದಾಯ ₹ 2 ಕೋಟಿ ತಲುಪಬಹುದು ಎಂದರು. ರಾತ್ರಿ ಅಪಾರ ಭಕ್ತ ಸಮೂಹದ ನಡುವೆ ಸಿದ್ದೇಶ್ವರಸ್ವಾಮಿಯ ಚಂದ್ರಮಂಡಲ ರಥೋತ್ವ ನಡೆಯಿತು. ಪ್ರಮುಖ ಬೀದಿಗಳಲ್ಲಿ ರಥೋತ್ಸವ ಮೆರವಣಿಗೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT