ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದುಶ್ಚಟ ಮುಕ್ತಿಯಿಂದ ಸಮಾಜದ ಅಭಿವೃದ್ಧಿ’

Last Updated 21 ಅಕ್ಟೋಬರ್ 2017, 6:49 IST
ಅಕ್ಷರ ಗಾತ್ರ

ಹಾವೇರಿ: ‘ಹಿಂದುಳಿದ ಸಮಾಜದವರು ದುಶ್ಚಟಗಳಿಂದ ದೂರವಾಗಿ, ಸಮಾಜದ ಅಭಿವೃದ್ಧಿಯ ಚಿಂತನೆ ನಡೆಸಬೇಕು’ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲ್ಲೂಕಿನ ನಾಗನೂರು ಗ್ರಾಮದ ಕಲ್ಮೇಶ್ವರ ದೇವಸ್ಥಾನದಲ್ಲಿ ಈಚೆಗೆ ನಡೆದ ಗಂಗಾ ಪರಮೇಶ್ವರಿ ಯುವಕ ಸಂಘದ ಉದ್ಘಾಟನೆ ಹಾಗೂ ಅಂಬಿಗರ ಚೌಡಯ್ಯನವರ ಸಭಾಭವನದ ಅಡಿಗಲ್ಲು ಸಮಾರಂಭದಲ್ಲಿ ಅವರು ಮಾತನಾಡಿದರು.

ಅಂಬಿಗರ ಚೌಡಯ್ಯನ ಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ‘ಹಿಂದುಳಿದ ಸಮಾಜದಲ್ಲಿ ಸಂಸ್ಕಾರ, ಸಂಪ್ರದಾಯ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಆಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ’ ಎಂದರು.

ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ‘ಶಿಕ್ಷಣದಿಂದ ಮಾತ್ರ ಹಿಂದುಳಿದ ಸಮಾಜದ ಅಭಿವೃದ್ಧಿ ಸಾಧ್ಯ. ಆದ್ದರಿಂದ, ಕಡ್ಡಾಯವಾಗಿ ಗುಣಮಟ್ಟದ ಶಿಕ್ಷಣವನ್ನು ಕೊಡಿಸಬೇಕು. ಶಿಕ್ಷಣವಂತರು ಸಮಾಜದ ಅಭಿವೃದ್ಧಿಗೆ ತಮ್ಮ ಸಲಹೆಗಳನ್ನು ನೀಡಬೇಕು’ ಎಂದರು.

ಕೂಡಲದ ಗುರುನಂಜೇಶ್ವರ ಮಠದ ಮದೇಶ್ವರ ಸ್ವಾಮೀಜಿ, ಜಿಲ್ಲಾ ಪಂಚಾಯ್ತಿ ಸದಸ್ಯ ವಿರೂಪಾಕ್ಷಪ್ಪ ಕಡ್ಲಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ, ಗ್ರಾಮ ಪಂಚಾಯ್ತಿ ಅಧ್ಯಕ್ಷ ರತ್ನಮ್ಮ ಜುಂಜಣ್ಣನವರ, ಉಪಾಧ್ಯಕ್ಷೆ ಉಳಿವೆಪ್ಪ ಗಾಳಿ, ಸದಸ್ಯರಾದ ನೀಲಪ್ಪ ಬಾರ್ಕಿ, ನೀಲ್ಲಪ್ಪ ಅವ್ವಕ್ಕನವರ, ಪುಟ್ಟವ್ವ ಓಂಕಾರಣ್ಣನವರ, ಶಕೀಲಾಬಾನು ಗುಡುಮ್ಮನವರ, ಗಂಗಾಮತ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಭೋವಿ, ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಸುಣಗಾರ, ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್‌.ಎಂ.ದಂಡಿನ, ಚಂದ್ರಪ್ಪ ಜಾಲಗಾರ, ಎಸ್‌.ಎನ್‌.ಮೆಡ್ಲೇರಿ, ಶಂಕರ ಸುತಾರ, ಸತೀಶ ಸುಣಗಾರ, ಬಾಬು ಸುಣಗಾರ, ಶಾಲಾ ಮುಖ್ಯೋಪಾಧ್ಯಾಯ ರಮೇಶ ಕರ್ಜಗಿ, ಜಿ.ಬಿ.ಸುಣಗಾರ, ಶಿವಾಜಪ್ಪ ಪುಟ್ಟಣ್ಣನವರ, ದೊಡ್ಡೆಲ್ಲಪ್ಪ ಮಂಟಗಣಿ, ತಿಪ್ಪಣ್ಣ ಬಾರ್ಕಿ ಹಾಗೂ ರವಿ ಬಾರ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT