ಇಂಗಳಗೊಂದಿ ಕಲ್ಲೇಶ್ವರ ಕೆರೆಗೆ ಬಾಗಿನ

ಭಾನುವಾರ, ಜೂನ್ 16, 2019
22 °C

ಇಂಗಳಗೊಂದಿ ಕಲ್ಲೇಶ್ವರ ಕೆರೆಗೆ ಬಾಗಿನ

Published:
Updated:

ಹಿರೇಕೆರೂರ: ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಯಿಂದ ನೀರು ತಂದು ತುಂಬಿಸಿರುವ ತಾಲ್ಲೂಕಿನ ಇಂಗಳಗೊಂದಿ ಗ್ರಾಮದ ಕಲ್ಲೇಶ್ವರ ಕೆರೆಗೆ ಶಾಸಕ ಯು.ಬಿ.ಬಣಕಾರ ಶುಕ್ರವಾರ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಣಕಾರ, ‘ಗ್ರಾಮದಲ್ಲಿ ಸತತ ಬರಗಾಲದಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದನ್ನು ಮನಗಂಡು ಜಿಲ್ಲಾ ಪಂಚಾಯ್ತಿ ಅನುದಾನದಲ್ಲಿ 5 ಲಕ್ಷ ಸೇರಿದಂತೆ ಸುಮಾರು 9 ಲಕ್ಷ ವೆಚ್ಚದಲ್ಲಿ 2 .ಕಿ.ಮೀ. ದೂರದ ತುಂಗಾ ಮೇಲ್ದಂಡೆ ಕಾಲುವೆಯಿಂದ ಗ್ರಾಮದ ಕಲ್ಲೇಶ್ವರ ಕೆರೆಗೆ ನೀರು ತರಲಾಗಿದೆ. ಇದರಿಂದ ಜನರ ನೀರಿನ ಬವಣೆ ಇಂಗಲಿದೆ’ ಎಂದರು.

ಅಮೂಲ್ಯವಾಗಿರುವ ನೀರನ್ನು ಅನಗತ್ಯ ಪೋಲು ಮಾಡದೇ ಮಿತವಾಗಿ ಬಳಸಬೇಕು ಎಂದು ಸಲಹೆ ಮಾಡಿದ ಶಾಸಕರು, ಗ್ರಾಮದ ಆಂಜನೇಯ ಸಮುದಾಯ ಭವನ ನಿರ್ಮಾಣಕ್ಕೆ ಸಂಸದರ ಅನುದಾನದಲ್ಲಿ 5 ಲಕ್ಷ ಕೊಡಿಸುವ ಭರವಸೆ ನೀಡಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಹೇಶ ಗುಬ್ಬಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಸುಮಿತ್ರಾ ಬಸನಗೌಡ ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಗಂಗಮ್ಮ ಹರಿಜನ, ಗುತ್ತಿಗೆದಾರ ರವಿ ಪುಟ್ಟಪ್ಪಗೌಡ್ರ, ಗ್ರಾಮ ಪಂಚಾಯ್ತಿ ಸದಸ್ಯರಾದ ಚೈತ್ರಾ ರಘು ಗಿಡ್ಡಪ್ಪನವರ, ಹನುಮಂತಪ್ಪ ಉಜನೀಪುರ, ಈರಪ್ಪ ಬಣಕಾರ, ರಾಮನಗೌಡ ದಿಗ್ಗಿಗೌಡ್ರ, ಉಜ್ಜನಗೌಡ ದಿಗ್ಗಿಗೌಡ್ರ, ಸಿದ್ದನಗೌಡ ಹಲಗೇರಿ, ಮಾದೇವಪ್ಪ ಅಡಿವೆಣ್ಣನವರ, ಪರಮೇಶಪ್ಪ ಹಿತ್ಲಳ್ಳಿ, ಹನುಮಂತಪ್ಪ ಹಿತ್ಲಳ್ಳಿ, ನಾಗರಾಜ ಹುಚ್ಚಣ್ಣನವರ, ಶ್ರೀನಿವಾಸ ಸಿಂಪಗಿ, ರವಿ ಹೊಗೆಸೊಪ್ಪಿನವರ, ಮಾದೇವಕ್ಕ ಕಡೂರ, ಲತಾ ಕೆಂಚಿಕೊಪ್ಪದ, ಕರಬಸವ್ವ ತಳವಾರ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry