ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರದ್ದಿಕಾಗದವೇ ಇಲ್ಲಿ ಕಲಿಕಾ ಸಾಮಗ್ರಿ!

Last Updated 21 ಅಕ್ಟೋಬರ್ 2017, 7:20 IST
ಅಕ್ಷರ ಗಾತ್ರ

ಶನಿವಾರಸಂತೆ: ಹೊಸ ಹೊಸ ಶೈಕ್ಷಣಿಕ ಸಾಧ್ಯತೆಗಳನ್ನು ಯೋಜಿಸಿ ಅದನ್ನು ಶಾಲಾ ಪರಿಸರದಲ್ಲಿ ಅಳವಡಿಸಿ ಕೊಳ್ಳುವುದರ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಶ್ರಮಿಸುತ್ತಿರುವ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಹೋಂ ವರ್ಕ್ ಕಾರ್ಡ್’ಗಳನ್ನು ಮಕ್ಕಳ ಮನೆ ಕಲಿಕೆಗೆ ಸಹಾಯಕವಾಗುವಂತೆ ರೂಪಿಸಿ ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಉಂಟು ಮಾಡಲಾಗುತ್ತಿದೆ.

ಶಿಕ್ಷಕರು ತಮ್ಮ ಸ್ವತಃ ಕೈಬರಹದಿಂದ ರೂಪಿಸಿರುವ ಕಾರ್ಡ್‌ಗಳು ಇವು. ವಿದ್ಯಾರ್ಥಿಗಳ ಹಳೆಯ ನೋಟ್‌ಬುಕ್ ಮೇಲ್ಭಾಗದ ರಟ್ಟು, ಮಿಕ್ಸಿ ಕುಕ್ಕರ್ ಹಾಗೂ ಟಿ.ವಿಗಳಿಗೆ ಬರುವಂತ ದಪ್ಪ ರಟ್ಟಿನ ಬಾಕ್ಸ್‌ಗಳನ್ನು ಬೇಕಾದ ಅಳತೆಗೆ ಕತ್ತರಿಸಿ ಅದಕ್ಕೆ ಬಿಳಿ ಹಾಳೆಯನ್ನು ಅಂಟಿಸಬೇಕು.

ಅದಕ್ಕೆ, ಬಣ್ಣಬಣ್ಣದ ಪೆನ್‌ಗಳಿಂದ ವಿದ್ಯಾರ್ಥಿಗಳ ಕಲಿಕೆಗೆ ಸಂಬಂಧಿಸಿದ ಅಂಶಗಳನ್ನು ಬರೆದು ಅದಕ್ಕೆ ಪ್ಲಾಸ್ಟಿಕ್ ಬೈಂಡು ಮಾಡಿ ಪ್ರತಿನಿತ್ಯ ಮಕ್ಕಳು ಬರೆದುಕೊಂಡು ಬರಲು ಮನೆಗೆ ನೀಡಲಾಗುವುದು. ಒಮ್ಮೆ ನಿರ್ಮಿಸಿದ ಕಾರ್ಡುಗಳನ್ನು ಪ್ಲಾಸ್ಟಿಕ್ ಬೈಂಡು ಮಾಡಿರುವುದರಿಂದ ಐದಾರು ವರ್ಷ ಇದನ್ನು ಬಳಸಬಹುದು

ಎಲ್ಲಾ ಕಲಿಕಾಂಶಗಳ ಒಂದೊಂದೆ ಅಂಶಗಳನ್ನು ಕಾರ್ಡಿನಲ್ಲಿ ಕೇಳ ಲಾಗಿರುತ್ತದೆ. ವಿದ್ಯಾರ್ಥಿಗಳಿಗೆ ಪುನರಾ ವರ್ತನೆ ಯಾದಂತಾಗಿ ಕಲಿಕೆ ಶಾಶ್ವತವಾಗುತ್ತದೆ.
ಹಲವು ಕಾರ್ಡುಗಳನ್ನು ರಚಿಸಿದ್ದು ಪ್ರತಿನಿತ್ಯ ವಿವಿಧ ತರಗತಿಯ ಮಕ್ಕಳು ಅವುಗಳನ್ನು ಒಬ್ಬರಿಗೊಬ್ಬರು ಬದಲಿಸಿಕೊಂಡು ಹೋಗುತ್ತಾರೆ. ಇಲ್ಲಿ ಕಲಿಕೆ ಬಲಗೊಳ್ಳುವುದರ ಜೊತೆಗೆ ಪ್ರತಿನಿತ್ಯ ಹೋಂ ವರ್ಕ್ ಬರೆಯುವುದು ತಪ್ಪುತ್ತದೆ ಎನ್ನುತ್ತಾರೆ ಶಿಕ್ಷಕರು.

ಕನ್ನಡ, ಇಂಗ್ಲಿಷ್, ಗಣಿತ, ಸಮಾಜ, ಪರಿಸರ ಎಲ್ಲಾ ವಿಷಯಗಳಿಗು ಸೇರಿದ ಸುಮಾರು 800ಕ್ಕೂ ಹೆಚ್ಚು ಕಾರ್ಡುಗಳನ್ನು ರಚಿಸಿಟ್ಟುಕೊಂಡು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಬಣ್ಣ ಬಣ್ಣಗಳಿಂದ ಆಕರ್ಷಕವಾಗಿರುವುದರ ಜತೆಗೆ ಪೋಷಕರಿಗೂ ಇದು ಹೋಂ ವರ್ಕ್ ಮಾಡಿಸಲು ಸುಲಭವಾಗಿ ಮಾರ್ಗದರ್ಶನ ನೀಡುತ್ತದೆ.

ಕೆಲವೊಂದು ಕಾರ್ಡುಗಳು ಗಣಿತ, ಸಮಾಜ... ಹೀಗೆ ಎಲ್ಲಾ ವಿಷಯಗಳನ್ನು ಒಳಗೊಂಡಂತೆ ರಚಿಸಲಾಗಿದ್ದು ಪ್ರತ್ಯೇಕ ಪ್ರತ್ಯೇಕವಾಗಿ ಹೋಂ ವರ್ಕ್ ನೀಡುವ ಸಮಸ್ಯೆ ತಪ್ಪುತ್ತದೆ. ಈ ಕಾರ್ಡುಗಳು ಕೇವಲ ಮನೆಗೆಲಸಕ್ಕಲ್ಲದೆ ಶಿಕ್ಷಕರಿಲ್ಲದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಇದನ್ನು ಪಡೆದುಕೊಂಡು ಸ್ವಕಲಿಕೆ ಹೊಂದಲು ಸಹಾಯಕವಾಗಿದೆ.

ಶನಿವಾರ ಮತ್ತು ಭಾನುವಾರದ ರಜೆಯ ಅವಧಿಗೆಂದೇ ಹೆಚ್ಚಿನ ವಿಷಯಗಳನ್ನೊಳಗೊಂಡು ರಚಿಸಿರುವ ಕಾರ್ಡುಗಳನ್ನು ನೀಡಲಾಗುತ್ತಿದೆ. ಅಲ್ಲದೇ ಮಧ್ಯಂತರ ರಜೆ ಮತ್ತು ಬೇಸಿಗೆ ರಜೆಯಲ್ಲಿಯೂ ವಿದ್ಯಾರ್ಥಿಗಳ ಕಲಿಕೆ ಪುನರಾವರ್ತನೆಯಾಗುವಂತೆ ರಚಿಸಿರುವ ಕಾರ್ಡುಗಳನ್ನು ನೀಡಲಾಗುತ್ತಿದೆ.

ವಿದ್ಯಾರ್ಥಿಗಳು ಪಠ್ಯವನ್ನು ಆಳವಾಗಿ ಅಧ್ಯಯನ ಮಾಡಿ ಬರೆಯುವಂತೆ ರಚಿಸಲಾಗಿದೆ. ಮಕ್ಕಳ ಕೈ ಬರವಣಿಗೆಯ ಅಂದ ಹೆಚ್ಚಿಸಲು ಕಾಫಿ ರೈಟಿಂಗ್ ಮಾದರಿಯ ನಕಲು ಮಾಡುವ ಕಾರ್ಡ್‌ಗಳನ್ನು ನೀಡಲಾಗುತ್ತಿದೆ ಎಂದು ಶಿಕ್ಷಕ ಸಿ.ಎಸ್. ಸತೀಶ್ ತಿಳಿಸಿದರು.
ಶ.ಗ. ನಯನತಾರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT