ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೆಮಾರಿ ಕವ್ವಾಲಿಗಳ ಹಾಡುಗಳಿಗೆ ತಲೆದೂಗಿದ ಸಂಗೀತ ಪ್ರೇಮಿಗಳು

Last Updated 21 ಅಕ್ಟೋಬರ್ 2017, 8:58 IST
ಅಕ್ಷರ ಗಾತ್ರ

ಲಿಂಗಸುಗೂರು: ಗಡಿಯಾರ ವೃತ್ತದಲ್ಲಿ ಹರಕು ಚಾಪೆ ಹಾಸಿಕೊಂಡು ಪಕ್ಕದಲ್ಲಿ ಬ್ಯಾಟರಿ ಮೂಲಕ ಆಂಪ್ಲಿಫಾಯರ್‌ ಹಚ್ಚಿಕೊಂಡು ಮೈಕ್‌ ಸ್ಟ್ಯಾಂಡ್‌ ಎದುರು ಮಾಸಿದ ಬಟ್ಟೆ ತೊಟ್ಟ ಮಹಿಳೆಯರು, ಪುರುಷರು ಹಾಡಿದ ಗೀತೆಗಳಿಗೆ ಸ್ಥಳೀಯರು ತಲೆತೂಗಿದರು.

ಶುಕ್ರವಾರ ದೀಪಾವಳಿ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಳ್ಳಲು ಬಜಾರಕ್ಕೆ ಬಂದಿದ್ದ ಮಹಾರಾಷ್ಟ್ರದ ಮೂಲದ ನಾಗಪುರದ ಅಲೆಮಾರಿ ಕವ್ವಾಲಿ ಕುಟುಂಬದವರ ಇಂಪಾದ ಧ್ವನಿ, ಡೊಲಕ್‌ಗಳ ಬಡಿತವು ಸಂಗೀತ ಪ್ರಿಯರಿಗೆ ಖುಷಿ ತಂದಿತು.

ಅಲೆಮಾರಿಗಳ ಕವ್ವಾಲಿ ಹಾಡುಗಳು ಮತ್ತು ಡೋಲಕ್‌ ಬಡಿತದ ನಾದಕ್ಕೆ ಮೆಚ್ಚಿದ ಬಹುತೇಕ ಮುಸ್ಲಿಂ ಯುವಕರು ರಾಜಾಭಕ್ಷಾ ದರ್ಗಾದ ಬಯಲಿನಲ್ಲಿ ಕವ್ವಾಲಿ ನಡೆಸಲು ಮನವಿ ಮಾಡಿಕೊಂಡರು.

‘ಅತ್ಯಂತ ಕಡು ಬಡತನದಲ್ಲಿ ಬದುಕು ಕಟ್ಟಿಕೊಂಡಿದ್ದೇವೆ. ವರ್ಷದ 8 ತಿಂಗಳು ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ಸಮೇತ ಊರಿಂದ ಊರಿಗೆ ಅಲೆಯುತ್ತ ಕವ್ವಾಲಿ ಹಾಡು ಹಾಡುತ್ತೇವೆ’ ಎಂದು ಶೇಖ ಕುಟುಂಬದ ಮುಖ್ಯಸ್ಥ ಅಬ್ದುಲ್‌ಕಹಿಂ ಶೇಖ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT