ಅನುಷ್ಕಾಗೆ ವಿರಾಟ್‌ ನೀಡಿದ ಭರವಸೆ: ಅಭಿಮಾನಿಗಳಲ್ಲಿ ಸಂಭ್ರಮ

ಮಂಗಳವಾರ, ಜೂನ್ 18, 2019
23 °C

ಅನುಷ್ಕಾಗೆ ವಿರಾಟ್‌ ನೀಡಿದ ಭರವಸೆ: ಅಭಿಮಾನಿಗಳಲ್ಲಿ ಸಂಭ್ರಮ

Published:
Updated:
ಅನುಷ್ಕಾಗೆ ವಿರಾಟ್‌ ನೀಡಿದ ಭರವಸೆ: ಅಭಿಮಾನಿಗಳಲ್ಲಿ ಸಂಭ್ರಮ

ಬೆಂಗಳೂರು: ಮದುವೆ ಸಮಾರಂಭದಲ್ಲಿ ವಿರಾಟ್‌ ಕೊಹ್ಲಿ ತನ್ನ ಪಕ್ಕದಲ್ಲಿಯೇ ಕುಳಿತ ಗೆಳತಿ ಅನುಷ್ಕಾ ಶರ್ಮಾಗೆ ಜೀವನದ ಪ್ರತಿ ಹಂತದಲ್ಲಿ ಜೋಪಾನ ಮಾಡುವ ಭರವಸೆ ನೀಡಿದ್ದಾರೆ. ಈ ವಿಡಿಯೊ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಬಹು ಚರ್ಚಿತ ವಿಷಯವಾಗಿದೆ.

ಮುದ್ದಾಗಿ ಸಿದ್ಧಗೊಂಡ ಜೋಡಿ ಎದುರಿಗೆ ಹಸೆಮಣೆಯಲ್ಲಿ ಕುಳಿತ ವಧು–ವರರ ಸಂಭಾಷಣೆಯನ್ನು ಊಹಿಸುತ್ತಿದ್ದಾರೆ. ತಿಂಗಳಲ್ಲಿ 15 ದಿನಗಳು ಅಡುಗೆ ಮಾಡುವುದಾಗಿ ವರ ಭರವಸೆ ನೀಡುತ್ತಿರುವುದಾಗಿ ವಿರಾಟ್‌ ಹೇಳುತ್ತಾರೆ.

ಅನುಷ್ಕಾ: (ಒಪ್ಪಿಗೆ ಸೂಚಿಸುತ್ತ) ರುಚಿಯ ಬಗ್ಗೆ ದೂರದೆ ತಿನ್ನುವೆ... ನಿನ್ನ ಎಲ್ಲ ಗುಟ್ಟುಗಳನ್ನು ಹೃದಯದಲ್ಲಿ ಬಚ್ಚಿಟ್ಟು ಕಾಪಾಡುವೆ.

ವಿರಾಟ್‌: ಎಂದಿಗೂ ನಿನ್ನನ್ನು ಬದಲಿಸುವ ಜಿದ್ದಿಗೆ ಬೀಳುವುದಿಲ್ಲ....

ಹೀಗೆ ವಿರುಷ್ಕಾ ನಡುವೆ ಭರವಸೆಗಳು ಮುಂದುವರಿದು ಒಬ್ಬರಿಗೊಬ್ಬರು ಜೋಪಾನ ಮಾಡುವ ಅಂತಿಮ ಮಾತಿನೊಂದಿಗೆ ಸಂಬಂಧ ಗಟ್ಟಿಗೊಳ್ಳುತ್ತದೆ.

‘ನಯೆ ರಿಷ್ತೆ ನಯೆ ವಾದೆ’ ಹೆಸರಿನ ಟಿವಿ ಜಾಹೀರಾತಿನಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಇಬ್ಬರ ನಡುವಿನ ಮಾತು, ಪ್ರೀತಿ ಕಂಡ ಅಭಿಮಾನಿಗಳು ಸಂಭ್ರಮಿಸುತ್ತಿದ್ದು, #NayeRishteNayeVaade ಮೂಲಕ ಟ್ವಿಟರ್‌ ಟ್ರೆಂಡ್‌ ಸೃಷ್ಟಿಯಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry