3

ಮೊಟ್ಟೆ ತುಂಬಿದ್ದ ಕ್ಯಾಂಟರ್‌ಗೆ ಬಸ್ ಡಿಕ್ಕಿ: ಮೊಟ್ಟೆ ಆಯ್ದುಕೊಳ್ಳಲು ಮುಗಿಬಿದ್ದ ಜನ

Published:
Updated:
ಮೊಟ್ಟೆ ತುಂಬಿದ್ದ ಕ್ಯಾಂಟರ್‌ಗೆ ಬಸ್ ಡಿಕ್ಕಿ: ಮೊಟ್ಟೆ ಆಯ್ದುಕೊಳ್ಳಲು ಮುಗಿಬಿದ್ದ ಜನ

ತುಮಕೂರು: ಶಿರಾ ಸಮೀಪದ ಕಳ್ಳಂಬೆಳ್ಳ ಹತ್ತಿರ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪಂಚರ್‌ ಅಗಿ ನಿಂತಿದ್ದ ಮೊಟ್ಟೆ ತುಂಬಿದ್ದ ಕ್ಯಾಂಟರ್‌ಗೆ ಹಿಂಬದಿಯಿಂದ ಬಂದ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿಹೊಡೆದಿದೆ.

ಕ್ಯಾಂಟರ್‌ನಲ್ಲಿದ್ದ ಅಂದಾಜು ₹ 4 ಲಕ್ಷಕ್ಕೂ ಹೆಚ್ಚು ಮೊತ್ತದ ಮೊಟ್ಟೆ ನಷ್ಟವಾಗಿದೆ.

ಕ್ಯಾಂಟರ್‌ನಿಂದ ಕೆಳಗೆ ಬಿದ್ದು ಸಾಕಷ್ಟು ಮೊಟ್ಟೆ ಹಾಳಾಗಿವೆ. ಇದರಲ್ಲಿಯೆ ಇನ್ನೂ ಚೆನ್ನಾಗಿದ್ದ ಮೊಟ್ಟೆಗಳನ್ನು ಸಾರ್ವಜನಿಕರು ಮುಗಿದ್ದು ಆರಿಸಿಕೊಂಡರು.

ಕ್ಯಾಂಟರ್ ಹೊಸಪೇಟೆಯಿಂದ ಬೆಂಗಳೂರಿಗೆ ಮೊಟ್ಟೆ ಸಾಗಿಸುತ್ತಿತ್ತು. ಬಸ್ ದಾವಣಗೆರೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿತ್ತು ಎಂದು ಕಳ್ಳಂಬೆಳ್ಳ ಠಾಣೆ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry