ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಚ್ಚರಿ: ಸೇತುವೆ ಕಳವು

Last Updated 21 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಜಿರಾಫ್‌ಗೆ ಯಾಕೆ ನೀಲಿ ನಾಲಗೆ?

ಜಿರಾಫ್‌ಗೆ ಚರ್ಮದ ಮೆಲನಿನ್‌ ಪಿಗ್ನೆಂಟ್‌ನ ಪ್ರಮಾಣ ಜಾಸ್ತಿ. ಅದರಿಂದಲೇ ಈ ಪ್ರಾಣಿಯ ನಾಲಗೆಯ ಬಣ್ಣ ನೀಲಿ. ಆಫ್ರಿಕಾದ ಉಷ್ಣ ಪ್ರದೇಶಗಳಲ್ಲಿ ಮರಗಳ ಎಲೆಗಳನ್ನು ತಿನ್ನಲು ಪದೇ ಪದೇ ಅದು ನಾಲಗೆಯನ್ನು ಹೊರಚಾಚುತ್ತದೆ. ನೀಲಿ ಬಣ್ಣದ ನಾಲಗೆ ಇರುವುದರಿಂದ ಸೂರ್ಯನ ಶಾಖ ಅದಕ್ಕೆ ಹೆಚ್ಚು ತಾಕುವುದಿಲ್ಲ.

**

ಸೇತುವೆ ಕಳವು

ಪೂರ್ವ ರಷ್ಯಾದ ಖಬಾರೋವಸ್ಕ್‌ನಲ್ಲಿ 200 ಟನ್‌ಗಳ ಲೋಹದ ಸೇತುವೆಯೊಂದು ಕಳವಾಯಿತು. ಗುಜರಿ ಲೋಹಗಳನ್ನು ಕದಿಯುವವರ ತಂಡ ಈ ದುಷ್ಕೃತ್ಯ ಮಾಡಿತು. ಸ್ಥಳೀಯ ಶಾಖಾ ಘಟಕಕ್ಕೆ ಸಂಪರ್ಕ ಕಲ್ಪಿಸಿದ್ದ ಏಕೈಕ ಸೇತುವೆ ರಾತ್ರೋ ರಾತ್ರಿ ಕಾಣೆಯಾಗಿತ್ತು. ಮೊದಲು ಇದ್ದ ಸೇತುವೆಗೆ ಬದಲಾಗಿ ಇನ್ನೊಂದು ಸೇತುವೆ ನಿರ್ಮಿಸಲು ಅದಕ್ಕಿಂತ ಹತ್ತು ಪಟ್ಟು ಹೆಚ್ಚು ಹಣ ಖರ್ಚಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT