ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಆರೋಗ್ಯ ಸಂಸ್ಥೆ ಸೌಹಾರ್ದ ರಾಯಭಾರಿಯಾಗಿ ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್‌ ಮುಗಾಬೆ ನೇಮಕ

Last Updated 21 ಅಕ್ಟೋಬರ್ 2017, 15:38 IST
ಅಕ್ಷರ ಗಾತ್ರ

ಜಿನೇವಾ: ಆಫ್ರಿಕಾದ ದೀರ್ಘಕಾಲದ ನಾಯಕ, ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್‌ ಮುಗಾಬೆ(93) ಅವರನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯ ಸೌಹಾರ್ದ ರಾಯಭಾರಿಯಾಗಿ ನೇಮಿಸಲಾಗಿದೆ.

ಉರುಗ್ವೆಯಲ್ಲಿ ನಡೆದ ಸಭೆಯಲ್ಲಿ ಡಬ್ಲುಎಚ್‌ಒ ಮಹಾನಿರ್ದೇಶಕ ಟೆಡ್ರೋಸ್‌ ಗೆಬ್ರೆಯೇಸಸ್‌ ಮುಗಾಬೆ ಅವರ ನೇಮಕಾತಿಯನ್ನು ಪ್ರಕಟಿಸಿದ್ದಾರೆ. ಇಥಿಯೋಪಿಯಾದ ಟೆಡ್ರೋಸ್‌ ಡಬ್ಲುಎಚ್‌ಒ ಆಫ್ರಿಕಾ ಮೂಲದ ಮೊದಲ ಮಹಾನಿರ್ದೇಶಕರಾಗಿದ್ದಾರೆ.

ಮುಗಾಬೆ ಅವರ ನೀತಿಗಳಿಂದ ಜಿಂಬಾಬ್ವೆಯಲ್ಲಿ ಆರೋಗ್ಯ ವ್ಯವಸ್ಥೆ, ಆರ್ಥಿಕತೆ ಸೇರಿ ಹಲವು ರೀತಿಯ ಬಿಕ್ಕಟ್ಟಿಗೆ ಕಾರಣವಾಗಿದೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯ ಹಲವು ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸೌಹಾರ್ದ ರಾಯಬಾರಿ ಸ್ಥಾನಕ್ಕೆ ಮುಗಾಬೆ ಆಯ್ಕೆಯನ್ನು ಜಾಗತಿಕ ಮಟ್ಟದ ಅನೇಕ ಸಂಸ್ಥೆಗಳು ವಿರೋಧ ಮತ್ತು ಕಳವಳ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT