ಕೋಮು ಸಂಘರ್ಷಕ್ಕೆ ಹುನ್ನಾರ; ಮುನಿಯಪ್ಪ

ಶುಕ್ರವಾರ, ಮೇ 24, 2019
30 °C

ಕೋಮು ಸಂಘರ್ಷಕ್ಕೆ ಹುನ್ನಾರ; ಮುನಿಯಪ್ಪ

Published:
Updated:

ಕೋಲಾರ: ‘ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುವ ಮೂಲಕ ಕೋಮು ಸಂಘರ್ಷಕ್ಕೆ ಅವಕಾಶ ನೀಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಶನಿವಾರ ಇಲ್ಲಿ ಟೀಕಿಸಿದರು.

‘ಭಾರತ ಜಾತ್ಯತೀತ ರಾಷ್ಟ್ರ. ರಾಷ್ಟ್ರದಲ್ಲಿನ ಎಲ್ಲ ಧರ್ಮಗಳನ್ನು ಗೌರವಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುತ್ತಿರುವುದು ಸಮಂಜಸವಾಗಿದೆ’ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನಕ್ಕೆ ಗೌರವ ನೀಡುವುದಾಗಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ, ಸಂಸದ ಪ್ರಹ್ಲಾದ ಜೋಷಿ ಸಂಸತ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿರೋಧಿಸುವುದಾದರೆ ಅದು ಸಂವಿಧಾನ ವಿರೋಧಿಸಿದಂತೆ. ಟಿಪ್ಪು ಸುಲ್ತಾನ್ ಜಯಂತಿ ಸಂವಿಧಾನಬದ್ಧವಾಗಿದೆ. ಇದನ್ನು ವಿರೋಧಿಸುವ ಬಿಜೆಪಿಯವರು ಸಂವಿಧಾನ ವಿರೋಧಿಗಳು ಎಂದು ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry