ಪ್ರಜ್ವಲ್ ವಿರುದ್ಧ ದೇವೇಗೌಡ ಅಸಮಾಧಾನ

ಸೋಮವಾರ, ಮೇ 20, 2019
30 °C

ಪ್ರಜ್ವಲ್ ವಿರುದ್ಧ ದೇವೇಗೌಡ ಅಸಮಾಧಾನ

Published:
Updated:

ಬಿಡದಿ (ರಾಮನಗರ): ‘ಪ್ರಜ್ವಲ್‌ ರೇವಣ್ಣ ಮಾಧ್ಯಮಗಳ ಮುಂದೆ ಮಾತನಾಡುವುದನ್ನು ಕೆಲವರು ಮನೋರಂಜನೆ ಎಂದುಕೊಂಡಿದ್ದಾರೆ. ಅಂತಹದ್ದನ್ನು ನಾನು ಪ್ರೋತ್ಸಾಹಿಸುವುದಿಲ್ಲ’ ಎಂದು ಜೆಡಿಎಸ್‌ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಇಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನಗೆ ಬೆಳೆಸುವುದೂ ಗೊತ್ತಿದೆ. ತೀರಾ ಚೇಷ್ಟೆ ಮಾಡಿದರೆ ಹೊರಹಾಕುವುದೂ ಗೊತ್ತಿದೆ’ ಎಂದು ಎಚ್ಚರಿಸಿದರು.

‘ಪ್ರಜ್ವಲ್‌ ರಾಜಕಾರಣಕ್ಕೆ ಬರುವುದನ್ನು ಯಾರೋ ತಪ್ಪಿಸಲು ಆಗದು. ಆದರೆ, ಅವನಂತೆಯೇ ಸಾಕಷ್ಟು ಯುವಕರು ಪಕ್ಷದಲ್ಲಿ ಇದ್ದಾರೆ. ನಿಖಿಲ್‌ ಕೂಡ ಪಕ್ಷದ ಪರ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ. ಎಲ್ಲರಿಗೂ ಸೂಕ್ತ ಸಮಯದಲ್ಲಿ ಅವಕಾಶ ದೊರೆಯಲಿದೆ’ ಎಂದರು.

ಅನಿತಾ ಸ್ಪರ್ಧೆ ಇಲ್ಲ: ‘ಕಾರ್ಯಕರ್ತರು ಏನೇ ಒತ್ತಡ ಹೇರಿದರೂ ಚನ್ನಪಟ್ಟಣದಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry