ಗುಜರಾತ್‌ಗೆ ಮೋದಿ ಭೇಟಿ ಇಂದು

ಮಂಗಳವಾರ, ಜೂನ್ 25, 2019
26 °C
ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

ಗುಜರಾತ್‌ಗೆ ಮೋದಿ ಭೇಟಿ ಇಂದು

Published:
Updated:
ಗುಜರಾತ್‌ಗೆ ಮೋದಿ ಭೇಟಿ ಇಂದು

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಭೇಟಿ ವೇಳೆ ಅವರು ಹಲವು ಯೋಜನೆಗಳನ್ನು ರಾಜ್ಯಕ್ಕೆ ಸಮರ್ಪಿಸಲಿದ್ದಾರೆ.

ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೋದಿ ಅವರು ತಮ್ಮ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಇದು 19ನೇ ಬಾರಿ. ಇದು ಈ ತಿಂಗಳಲ್ಲಿ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಮೂರನೇ ಬಾರಿ. ಡಿಸೆಂಬರ್‌ ವೇಳೆಗೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ಗುಜರಾತ್‌ನ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ ಪ್ರಾಂತಗಳಿಗೆ ಜಲ ಸಂಪರ್ಕ ಕಲ್ಪಿಸುವ ರೊ–ರೊ ಸಮುದ್ರಯಾನ ಸೇವೆಯನ್ನು ಉದ್ಘಾಟಿಸಲಿದ್ದಾರೆ. ನಂತರ ಅವರು ವಡೋದರಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸುಮಾರು ₹ 1,140 ಕೋಟಿ ವೆಚ್ಚದ ಹಲವು ಯೋಜನೆಗಳಿಗೆ ಪ್ರಧಾನಿ ಈ ಕಾರ್ಯಕ್ರಮದಲ್ಲಿ ಚಾಲನೆ ನೀಡಲಿದ್ದಾರೆ. ಆನಂತರ ವಡೋದರಾ ವಿಮಾನ ನಿಲ್ದಾಣದವರೆಗೂ 14 ಕಿ.ಮೀ ರೋಡ್ ಷೋ ನಡೆಸಲಿದ್ದಾರೆ.ಹತ್ತು ಪಟ್ಟು ಕುಗ್ಗಲಿದೆ ಪ್ರಯಾಣದ ಅಂತರ

ಸೌರಾಷ್ಟ್ರದ ಭಾವಂಗರ್ ಜಿಲ್ಲೆಯ ಘೋಗ ಮತ್ತು ದಕ್ಷಿಣ ಗುಜರಾತ್‌ನ ದಹೇಜ್ಗಳ ಮಧ್ಯೆ ಸಮುದ್ರಯಾನ ಸೇವೆ ಆರಂಭವಾಗಲಿದೆ. ಈ ಎರಡೂ ನಗರಗಳು ವಾಣಿಜ್ಯ ಕೇಂದ್ರಗಳಾಗಿವೆ. ವಜ್ರ ಮತ್ತು ಜವಳಿ ಉದ್ದಿಮೆಗಳ ಕೇಂದ್ರಗಳಾಗಿ ಇವು ಗುರುತಿಸಿಕೊಂಡಿವೆ. ಹೀಗಾಗಿ ಎರಡೂ ನಗರಗಳ ಮಧ್ಯೆ ಇಲ್ಲಿನ ಜನರ ಓಡಾಟ ಹೆಚ್ಚು. ಈ ಎರಡೂ ನಗರಗಳನ್ನು ಕ್ಯಾಂಬೆ ಕೊಲ್ಲಿಯಲ್ಲಿ ಅರಬ್ಬೀ ಸಮುದ್ರ ಬೇರ್ಪಡಿಸಿದೆ. ಸದ್ಯ ಈ ನಗರಗಳ ಮಧ್ಯೆ ರಸ್ತೆ ಮತ್ತು ರೈಲು ಸಂಪರ್ಕ ಮಾತ್ರವಿದೆ. ಸಮುದ್ರಯಾನ ಸೇವೆಯಿಂದ ಈ ನಗರಗಳ ನಡುವಣ ಪ್ರಯಾಣದ ಅವಧಿ ಹತ್ತು ಪಟ್ಟು ಕಡಿಮೆ ಆಗಲಿದೆ ಎಂದು ಮೂಲಗಳು ಹೇಳಿವೆ.

*

ಘೋಗ ಮತ್ತು ದಹೇಜ್ ಮಧ್ಯದ ರಸ್ತೆ ಸಂಪರ್ಕದ ಅಂತರ 365 ಕಿ.ಮೀ

ಬಸ್‌ ಮತ್ತು ರೈಲುಗಳಲ್ಲಿ ಈ ನಗರಗಳ ಮಧ್ಯದ ಪ್ರಯಾಣದ ಅವಧಿ 10–12 ಗಂಟೆ

ಕಾರುಗಳಲ್ಲಿ ಈ ನಗರಗಳ ಮಧ್ಯದ ಪ್ರಯಾಣದ ಅವಧಿ 6–8 ಗಂಟೆ

ಎರಡೂ ನಗರಗಳ ನಡುವಣ ಸಮುದ್ರಮಾರ್ಗದ ಅಂತರ 31 ಕಿ.ಮೀ

ಸಮುದ್ರಯಾನದಲ್ಲಿ ಈ ನಗರಗಳ ಮಧ್ಯದ ಪ್ರಯಾಣದ ಅವಧಿ 1 ಗಂಟೆ

ಯೋಜನೆಯ ವೆಚ್ಚ ₹ 615 ಕೋಟಿ

* ಹಡಗುಗಳ ಮೂಲಕ ಈ ಸಮುದ್ರಯಾನ ನಡೆಯಲಿದೆ.ಪ್ರಯಾಣಿಕರು ಮತ್ತು ವಾಹನಗಳನ್ನು ಒಟ್ಟಿಗೇ ಕರೆದೊಯ್ಯಲು   ಅವಕಾಶವಾಗುವಂತೆ ಈ ಹಡಗುಗಳನ್ನು ವಿನ್ಯಾಸ ಮಾಡಲಾಗಿದೆ

* ಭಾನುವಾರ ಪ್ರಯಾಣಿಕರಿಗೆ ಮಾತ್ರ ಸಮುದ್ರಯಾನಕ್ಕೆ ಅವಕಾಶ ನೀಡಲಾಗತ್ತದೆ

* 2018ರ ಜನವರಿ ಅಂತ್ಯದಿಂದ ಕಾರು ಮತ್ತು ಬಸ್‌ಗಳನ್ನೂ ಹಡಗಿನಲ್ಲಿ ಸಾಗಿಸಲಾಗುತ್ತದೆ

* ಆನಂತರದ ದಿನಗಳಲ್ಲಿ ಸರಕುಗಳನ್ನು ಹೊತ್ತ ಟ್ರಕ್‌ಗಳನ್ನೂ ಹಡಗಿನಲ್ಲಿ ಸಾಗಿಸಲಾಗುತ್ತದೆ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry