‘ತಮಿಳಿನ ಆತ್ಮಾಭಿಮಾನ ಕೆದಕಬೇಡಿ’

ಮಂಗಳವಾರ, ಜೂನ್ 18, 2019
26 °C
‘ಮರ್ಸಲ್‌’: ಮೋದಿಗೆ ರಾಹುಲ್‌ ಗಾಂಧಿ ಎಚ್ಚರಿಕೆ

‘ತಮಿಳಿನ ಆತ್ಮಾಭಿಮಾನ ಕೆದಕಬೇಡಿ’

Published:
Updated:
‘ತಮಿಳಿನ ಆತ್ಮಾಭಿಮಾನ ಕೆದಕಬೇಡಿ’

ನವದೆಹಲಿ: ಕೇಂದ್ರ ಸರ್ಕಾರದ ಜಿಎಸ್‌ಟಿ ಮತ್ತು ನೋಟು ರದ್ದತಿ ನಿರ್ಧಾರಗಳನ್ನು ಟೀಕಿಸಿರುವ ಸಂಭಾಷಣೆಗಳನ್ನು ಹೊಂದಿರುವ, ನಟ ವಿಜಯ್‌ ನಟಿಸಿರುವ ತಮಿಳಿನ ‘ಮರ್ಸಲ್‌’ ಸಿನಿಮಾವನ್ನು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಬೆಂಬಲಿಸಿದ್ದಾರೆ.

ಚಿತ್ರದಲ್ಲಿನ ಸಂಭಾಷಣೆಗಳ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ ನಂತರ ಅವರು ಚಿತ್ರದ ಪರವಾಗಿ ಮಾತನಾಡಿದ್ದಾರೆ.

‘ಮೋದಿ ಅವರೇ, ತಮಿಳುನಾಡಿನಲ್ಲಿ ಸಿನಿಮಾಗಳು ತಮಿಳು ಸಂಸ್ಕೃತಿ ಮತ್ತು ಭಾಷೆಯನ್ನು ಆಳವಾಗಿ ಅಭಿವ್ಯಕ್ತಿಗೊಳಿಸುತ್ತವೆ. ಮರ್ಸಲ್‌ ಚಿತ್ರದ ವಿಷಯದಲ್ಲಿ ಮೂಗು ತೂರಿಸುವ ಮೂಲಕ ತಮಿಳು ಆತ್ಮಾಭಿಮಾನವನ್ನು ಕೆದಕಲು ಯತ್ನಿಸಬೇಡಿ’ ಎಂದು ರಾಹುಲ್‌ ಟ್ವೀಟ್‌ ಮೂಲಕ ಎಚ್ಚರಿಸಿದ್ದಾರೆ.

ಮರ್ಸಲ್‌ ಚಿತ್ರ ಮತ್ತು ನಟ ವಿಜಯ್ ಅವರನ್ನು ಗುರಿಯಾಗಿಸಿಕೊಂಡು ಬಿಜೆಪಿ ಟೀಕಿಸುತ್ತಿರುವುದಕ್ಕೆ ರಾಹುಲ್‌ ಗಾಂಧಿ ಅವರಿಗಿಂತಲೂ ಮೊದಲು ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಆಕ್ಷೇಪ ವ್ಯಕ್ತಪಡಿಸಿದ್ದರು.

ಬಿಜೆಪಿ ಮುಖಂಡ ಎಚ್‌. ರಾಜಾ ಅವರು ಚಿತ್ರದಲ್ಲಿನ ಸಂಭಾಷಣೆಗಳಿಗೂ ವಿಜಯ್‌ ಅವರ ಧಾರ್ಮಿಕ ಹಿನ್ನೆಲೆಗೂ ತಳಕು ಹಾಕಿ ಹೇಳಿಕೆ ನೀಡಿದ ಬೆನ್ನಲ್ಲೇ ಚಿದಂಬರಂ ಈ ಟ್ವೀಟ್‌ ಮಾಡಿದ್ದರು. ನಟನ ಧರ್ಮವನ್ನು ಉಲ್ಲೇಖಿಸುವುದುಕ್ಕಾಗಿ ರಾಜಾ ಅವರು ವಿಜಯ್‌ ಅವರನ್ನು ‘ಜೋಸೆಫ್‌ ವಿಜಯ್‌’ ಎಂದು ಕರೆದಿದ್ದರು.

‘ಮರ್ಸಲ್‌ನಲ್ಲಿರುವ ಸಂಭಾಷಣೆಗಳನ್ನು ತೆಗೆದುಹಾಕಬೇಕು ಎಂದು ಬಿಜೆಪಿ ಹೇಳುತ್ತಿದೆ. ಒಂದು ವೇಳೆ ‘ಪರಾಶಕ್ತಿ’ ಚಿತ್ರ ಇಂದು ಬಿಡುಗಡೆಯಾದರೆ ಆಗುವ ಪರಿಣಾಮಗಳನ್ನು ಊಹಿಸಿ. ಚಿತ್ರ ತಯಾರಕರ ಗಮನಕ್ಕೆ: ಸರ್ಕಾರದ ನೀತಿಗಳನ್ನು ಹೊಗಳುವ ಸಾಕ್ಷ್ಯಚಿತ್ರಗಳನ್ನು ಮಾತ್ರ ನೀವು ಮಾಡಬಹುದು ಎಂಬ ಕಾನೂನು ಬರುತ್ತಿದೆ’ ಎಂದು ಚಿದಂಬರಂ ವ್ಯಂಗ್ಯವಾಡಿದ್ದರು.ಕಮಲ್‌ ಹಾಸನ್‌ ಬೆಂಬಲ

‌ಮರ್ಸಲ್‌ ಚಿತ್ರಕ್ಕೆ ಖ್ಯಾತ ನಟ ಕಮಲ್‌ ಹಾಸನ್‌ ಅವರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಮರ್ಸಲ್‌ ಪ್ರಮಾಣೀಕೃತ ಸಿನಿಮಾ. ಅದನ್ನು ಮರು ಸೆನ್ಸಾರ್‌ ಮಾಡಬೇಡಿ. ತರ್ಕಬದ್ಧ ಪ್ರತಿಕ್ರಿಯೆ ನೀಡುವುದರ ಮೂಲಕ ಟೀಕೆಗಳಿಗೆ ಎದುರೇಟು ನೀಡಿ. ಟೀಕಾಕಾರರ ಬಾಯಿ ಮುಚ್ಚಿಸಬೇಡಿ. ಭಾರತವು ಯಾವಾಗ ಮಾತನಾಡುತ್ತದೆಯೋ, ಅಂದು ಅದು ಪ್ರಕಾಶಿಸಲಿದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry