ನಾಳೆ ಫಿಲಿ‍ಪ್ಪೀನ್ಸ್‌ಗೆ ನಿರ್ಮಲಾ

ಶನಿವಾರ, ಮೇ 25, 2019
33 °C

ನಾಳೆ ಫಿಲಿ‍ಪ್ಪೀನ್ಸ್‌ಗೆ ನಿರ್ಮಲಾ

Published:
Updated:
ನಾಳೆ ಫಿಲಿ‍ಪ್ಪೀನ್ಸ್‌ಗೆ ನಿರ್ಮಲಾ

ನವದೆಹಲಿ: ಆಗ್ನೇಯ ಏಷ್ಯಾ ರಾಷ್ಟ್ರಗಳ ರ‌ಕ್ಷಣಾ ಸಚಿವರ ಸಭೆಯಲ್ಲಿ (ಎಡಿಎಂಎಂ– ಆಸಿಯಾನ್ ರಕ್ಷಣಾ ಸಚಿವರ ಸಭೆ) ಪಾಲ್ಗೊಳ್ಳಲು ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಫಿಲಿಪ್ಪೀನ್ಸ್‌ಗೆ ತೆರಳಲಿದ್ದಾರೆ. ರಕ್ಷಣಾ ಸಚಿವರಾಗಿ ನಿರ್ಮಲಾ ಅವರಿಗೆ ಇದು ಮೊದಲ ವಿದೇಶ ಪ್ರವಾಸ.

ದಕ್ಷಿಣ ಚೀನಾ ಸಮುದ್ರದಲ್ಲಿ ಹೆಚ್ಚುತ್ತಿರುವ ಚೀನಾ ಪ್ರಾಬಲ್ಯ ಸೇರಿದಂತೆ ಪ್ರಾದೇಶಿಕ ಭದ್ರತೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಅಂತರರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಎದುರಿಸಲು ಸದಸ್ಯ ರಾಷ್ಟ್ರಗಳ ನಡುವೆ ರಕ್ಷಣೆ ಹಾಗೂ ಭದ್ರತಾ ಸಹಕಾರ ಹೆಚ್ಚಿಸಲು ಇರುವ ದಾರಿಗಳ ಬಗ್ಗೆ ಚರ್ಚೆಯಾಗಲಿದೆ. ಭಾರತದ ನಿಲುವನ್ನು ನಿರ್ಮಾಲಾ ಅವರು ಮಂಡಿಸಲಿದ್ದಾರೆ.

ಸಚಿವರು ತಮ್ಮ ಮೂರು ದಿನಗಳ ಪ್ರವಾಸದ ವೇಳೆ ವಿವಿಧ ದೇಶಗಳ ರಕ್ಷಣಾ ಸಚಿವರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry