ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ತುಂಬಲು ವಿಶೇಷ ಯೋಜನೆಗೆ ಮಂಜೂರು

Last Updated 22 ಅಕ್ಟೋಬರ್ 2017, 4:06 IST
ಅಕ್ಷರ ಗಾತ್ರ

ರಾಯಬಾಗ: ‘ತಾಲ್ಲೂಕಿನ 12 ಗ್ರಾಮಗಳ 15 ಕೆರೆಗಳನ್ನು ಕೃಷ್ಣಾ ನದಿ ನೀರಿನಿಂದ ತುಂಬಿಸುವ ಪ್ರಾಥಮಿಕ ಯೋಜನೆಗೆ ಸರ್ಕಾರದಿಂದ ₹ 90 ಕೋಟಿ ಅನುದಾನ ಮಂಜೂರಾಗಿದೆ’ ಎಂದು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾಡಾ ಅಧ್ಯಕ್ಷ ಈರಗೌಡ ಪಾಟೀಲ ಹೇಳಿದರು.

ತಾಲ್ಲೂಕಿನ ನಸಲಾಪುರ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಮನೆಮನೆಗೆ ಕಾಂಗ್ರೆಸ್ ಅಭಿಯಾನದಲ್ಲಿ ಅವರು ಮಾತನಾಡಿದರು. ‘ಈ ಯೋಜನೆಗೆ 0.198 ಟಿಎಂಸಿ ನೀರು ಬೇಕಾಗುತ್ತದೆ, ನೀರಾವರಿ ಸಚಿವ ಎಂ.ಬಿ. ಪಾಟೀಲ ಅನುಮೋದಿಸಿದ್ದಾರೆ, ಈ ಕೆರೆಗಳು ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿವೆ’ ಎಂದು ಅವರು ಹೇಳಿದರು.

ರಾಯಬಾಗ ತಾಲ್ಲೂಕು ಕಾಂಗ್ರೆಸ್‌ ಉಸ್ತುವಾರಿ ಕಾಂತಾ ನಾಯಿಕ ಮಾತನಾಡಿದರು. ಸರ್ಕಾರದ ಅಭಿವೃದ್ಧಿ ಕೆಲಸಗಳ ಕೈಪಿಡಿ ಮತ್ತು ಕಾಂಗ್ರೆಸ್ ಪಕ್ಷದ ಮನೆ ಮನೆಗೆ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಲಾಯಿತು.

ಅನಂತ ಮೊಹಿತೆ, ದಿಲೀಪ ಜಮಾದಾರ, ದೀಪಾ ಮಂಟೂರ, ಅಬ್ದುಲ್ ತಾಂಬಟ, ಬಾಹುಸಾಹೇಬ ಪಾಟೀಲ, ಕುಂತಿನಾಥ ಮಗದುಮ್ಮ, ಅಣ್ಣಾಸಾಹೇಬ ಸಮಾಜೆ, ಶ್ರವಣ ಕಾಂಬಳೆ, ಭರಮು ಖೊಂಬಾರೆ, ಅಜಿತ ಪಾಟೀಲ, ಸುಖದೇವ ಚಾವರೆ, ಕಮಾಲ್‌ ಇನಾಮದಾರ್, ಬಾಬಾಸಾಹೇಬ ಚೌಗಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT