ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಗಿರಿ: ಬಿ.ಟಿ. ಹತ್ತಿ ಕ್ಷೇತ್ರೋತ್ಸವ

Last Updated 22 ಅಕ್ಟೋಬರ್ 2017, 5:44 IST
ಅಕ್ಷರ ಗಾತ್ರ

ಹಾವೇರಿ: ತಾಲ್ಲೂಕಿನ ದೇವಗಿರಿ ಗ್ರಾಮದ ತಿರಕಪ್ಪ ಬಡ್ಡಿ ಜಮೀನಿನಲ್ಲಿ ಕೃಷಿ ಇಲಾಖೆ ಈಚೆಗೆ ಕ್ಷೇತ್ರೋತ್ಸವ ಆಚರಿಸಿತು. ‘ಆರ್‌ಐಬಿ’ ಎಂಬ ಹೊಸ ಪದ್ಧತಿ ಅನುಸರಿಸಿ ಬೆಳೆಸಿದ ಹತ್ತಿಯ ಹೊಲವನ್ನು ಕೃಷಿ ಉಪ ನಿರ್ದೇಶಕ ಎಚ್. ಹುಲಿರಾಜ, ಸಹಾಯಕ ನಿರ್ದೇಶಕರಾದ ಡಿ. ಕೆ. ಕೊರಚರ, ಎನ್.ಎಫ್ ಕಟ್ಟೇಗೌಡ್ರ ಮತ್ತಿತರ ಅಧಿಕಾರಿಗಳ ಹಾಗೂ ರಸಗೊಬ್ಬರ ವಿತರಕರು ವೀಕ್ಷಣೆ ಮಾಡಿದರು.

‘ಈ ಪದ್ಧತಿಯಲ್ಲಿ ಬಿ.ಟಿ. ಶೇ 95 ಮತ್ತು ಇತರ ಶೇ 5 ಪ್ರಮಾಣದಲ್ಲಿ ಬೀಜಗಳನ್ನು ಮಿಶ್ರಣ ಮಾಡಿ ಬಿತ್ತಲಾಗಿದ್ದು, ಕಾಯಿ ಕೊರಕ ಕೀಟಗಳು ಇತರ ಗಿಡಗಳನ್ನು ಆಶ್ರಯಿಸಿವೆ. ಆ ಮೂಲಕ ಬಿ.ಟಿ ಹತ್ತಿ ಕಾಯಿ ಕೊರಕಗಳಿಂದ ನಿರೋಧಕತೆ ಬೆಳೆಸಿಕೊಳ್ಳಬಹುದು.

ಮುಂಬರುವ ದಿನಗಳಲ್ಲಿ ರೈತರಿಗೆ ಈ ಕುರಿತು ಮಾಹಿತಿ ನೀಡಿ ಉತ್ತಮ ನಿರ್ವಹಣೆ ಮಾಡಬಹುದು’ ಎಂದು ಅಧಿಕಾರಿಗಳು ತಿಳಿಸಿದರು. ಶಂಬಣ್ಣ ಹಾದಿಮನಿ, ನಿಂಗಪ್ಪ ಜಾಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT