ತುಂಗಭದ್ರೆಯಲ್ಲಿ ಪ್ರವಾಸಿಗರ ಕಲರವ

ಭಾನುವಾರ, ಮೇ 26, 2019
31 °C

ತುಂಗಭದ್ರೆಯಲ್ಲಿ ಪ್ರವಾಸಿಗರ ಕಲರವ

Published:
Updated:
ತುಂಗಭದ್ರೆಯಲ್ಲಿ ಪ್ರವಾಸಿಗರ ಕಲರವ

ಮುನಿರಾಬಾದ್‌: ಇಲ್ಲಿನ ತುಂಗಭದ್ರಾ ಜಲಾಶಯದಲ್ಲಿ ಕಳೆದ ಎರಡು ವಾರದಿಂದ ಒಳಹರಿವು ಹೆಚ್ಚಾಗಿದ್ದು, ಜಲಾಶಯ ಬಹುತೇಕ ಭರ್ತಿಯಾಗಿದೆ. ಸಂಪೂರ್ಣ ತುಂಬಲು ಇನ್ನೂ ಮೂರು ಅಡಿ ಬಾಕಿ ಇದೆ. ಭರ್ತಿಯಾಗುತ್ತಿರುವ ಜಲಯಾಶ ವೀಕ್ಷಣೆಗೆ ಪ್ರವಾಸಿಗರ ದಂಡು ಬರುತ್ತಿದೆ. ಅಲ್ಲದೆ, ವೀಕ್ಷಣೆಗೆ ಬಂದವರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.

ವಾಯುಭಾರ ಕುಸಿತದದಿಂದಾಗಿ ತುಂಗಾ ಮತ್ತು ಭದ್ರಾ ನದಿ ಪಾತ್ರದಲ್ಲಿ ಉತ್ತಮವಾಗಿ ಮಳೆ ಸುರಿದ ಕಾರಣ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿದೆ. ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯದಲ್ಲಿ ಹೆಚ್ಚು ನೀರು ಸಂಗ್ರಹವಾಗಿದೆ.

ಶನಿವಾರ ಬೆಳಗಿನ ನೀರಿನ ಮಟ್ಟ 1,630.16 ಅಡಿ (ಗರಿಷ್ಠ ಮಟ್ಟ 1,633 ಅಡಿ) ಇತ್ತು. ಒಟ್ಟು 90 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಜಲಾಶಯ ಭರ್ತಿಯಾಗಲು ಇನ್ನೂ 10 ಟಿಎಂಸಿ ಅಡಿ ನೀರಿನ ಅವಶ್ಯಕತೆ ಇದೆ.

ಈ ತಿಂಗಳ ಕೊನೆವರೆಗೆ ಮಳೆಯಾಗಿದ್ದರೆ ಮಾತ್ರ ತುಂಬುವ ಭರವಸೆ ಇತ್ತು. ಈಗ ಮಳೆ ಪ್ರಮಾಣ ಕಡಿಮೆ ಯಾಗಿರುವುದರಿಂದ ಒಳಹರಿವು ಪ್ರಮಾಣ ಕುಸಿದಿದ್ದು, ಜಲಾಶಯ ಸಂಪೂರ್ಣ ತುಂಬುವ ಭರವಸೆ ಕ್ಷೀಣವಾಗಿದೆ.

ನೀರು ಹೆಚ್ಚು ಸಂಗ್ರಹ ವಾಗಿರುವುದರಿಂದ ಜಲಾಶಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಶುಕ್ರವಾರ ದೀಪಾವಳಿ ಹಬ್ಬದ ಅಂಗವಾಗಿ ರಜೆ ಇದ್ದುದರಿಂದ ಬೆಳಗಿನಿಂದ ಪ್ರವಾಸಿಗರು ಬಂದು ಹಿನ್ನೀರಿನಲ್ಲಿ ಆಟವಾಡಿ ಸಂಭ್ರಮಿಸಿದರು.

ಯುವಕರು ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು. ಅಲ್ಲದೆ, ಸೂರ್ಯಾಸ್ತದ ದೃಶ್ಯವನ್ನು ಕಣ್ತುಂಬಿಕೊಂಡರು. ಜಲಾಶಯದ ಎಡಭಾಗದ ಮುನಿರಾಬಾದ್‌ನ ಲೇಕ್‌ವ್ಯೂ ಪ್ರವಾಸಿ ಮಂ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry