ಅಪಾಯಕ್ಕೆ ಆಹ್ವಾನಿಸುತ್ತಿದೆ ಸರ್ಕಾರಿ ಶಾಲೆ

ಗುರುವಾರ , ಜೂನ್ 20, 2019
30 °C

ಅಪಾಯಕ್ಕೆ ಆಹ್ವಾನಿಸುತ್ತಿದೆ ಸರ್ಕಾರಿ ಶಾಲೆ

Published:
Updated:
ಅಪಾಯಕ್ಕೆ ಆಹ್ವಾನಿಸುತ್ತಿದೆ ಸರ್ಕಾರಿ ಶಾಲೆ

ಭಾರತೀನಗರ: ಕುಸಿಯುತ್ತಿರುವ ಛಾವಣಿ, ಮಳೆ ನೀರು ನಿಂತಿರುವ ಕೊಠಡಿಗಳು, ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿ ಬಿರುಕು ಬಿಟ್ಟಿರುವ ಗೋಡೆಗಳು, ಜೀವಭಯದಲ್ಲಿ ಪಾಠ ಕೇಳುತ್ತಿರುವ ಶಾಲಾ ಮಕ್ಕಳು.

ಇದು, ಸಮೀಪದ ಬೊಪ್ಪಸಮುದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದುಸ್ಥಿತಿಯ ಚಿತ್ರಣ ಸರ್ಕಾರಿ ಶಾಲೆಗಳನ್ನು ಉಳಿಸಿ ಎಂದು ಬೊಬ್ಬಿರಿಯುತ್ತಿರುವ ನಮ್ಮ ಜನಪ್ರತಿನಿಧಿಗಳು ಶಾಲೆಗಳಿಗೆ ಮೂಲ ಸೌಕರ್ಯ ನೀಡದೆ ವಂಚಿಸುತ್ತಿದ್ದಾರೆ ಎನ್ನಲು ಈ ಶಾಲೆಯೇ ಸಾಕ್ಷಿ.

ಶಾಲೆಯು ಗ್ರಾಮದ ಹೃಯಯ ಬಾಗದಲ್ಲಿದೆ. ಇದು ಆರ್‌ಸಿಸಿ ಕಟ್ಟಡವಾಗಿದ್ದು ಒಟ್ಟು 8 ಕೊಠಡಿಗಳಿವೆ. 1 ರಿಂದ 7 ತರಗತಿವರೆಗೆ 86 ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. 4 ಮಂದಿ ಶಿಕ್ಷಕರಿದ್ದಾರೆ. 4 ಕೊಠಡಿಗಳು ಮಾತ್ರ ಸುಸ್ಥಿತಿಯಲ್ಲಿದ್ದು ಉಳಿದ 4 ಕೊಠಡಿಗಳು ಛಾವಣಿ ಕುಸಿದಿದೆ. ಮಕ್ಕಳು ಶಾಲೆಗೆ ಬರಲು ಭಯಪಡುತ್ತಿದ್ದಾರೆ. ಪೋಷಕರು ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಅಪಾಯದಲ್ಲಿರುವ 2 ಕೊಠಡಿಗಳಿಗೆ ಬೀಗ ಹಾಕಲಾಗಿದೆ.

ಮಕ್ಕಳಿರುವ ಈ ಜಾಗದಲ್ಲಿ ಸದಾ ಭಯದ ವಾತಾವರಣ ಇದೆ. ಗೋಡೆ ಬೀಳುವ ಮೊದಲು ಎಚ್ಚೆತ್ತುಕೊಳ್ಳಬೇಕು. ಮಕ್ಕಳ ಜೀವವನ್ನು ಹಗುರವಾಗಿ ಪರಿಗಣಿಸಬಾರದು. ಮುಂದೆ ಅನಾಹುತ ಆದರೆ ಯಾರು ಹೊಣೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ.

‘ಇಂತಹ ಅಪಾಯಕಾರಿ ಕೊಠಡಿಗಳಲ್ಲೇ ಮಕ್ಕಳಿಗೆ ಪಾಠ ಪ್ರವಚನ ನಡೆಯುತ್ತಿದೆ. ಗೋಡೆಗಳು ಸುಣ್ಣ ಬಣ್ಣ ಕಾಣದೇ ಬಣಗುಡುತ್ತಿವೆ. ಯಾವುದೋ ಹಳೆಯ ಪಾಳು ಕಟ್ಟಡದಂತೆ ಕಾಣುತ್ತಿರುವ ಶಾಲೆಯ ಕಿಟಕಿ, ಬಾಗಿಲುಗಳು ಮಣ್ಣು ಹಿಡಿದಿವೆ.

ಮಳೆ ಬಂದರೆ ಕೊಠಡಿಯಲ್ಲಿ ನಿಲ್ಲಲು ಸಾಧ್ಯವಾಗುವುದಿಲ್ಲ. ಮಕ್ಕಳು ನೀರಿನೊಳಗೆ ಪಾಠ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಶಾಲೆಯ ಶೌಚಾಲಯಗಳು ಕೂಡ ಹೊರತಾಗಿಲ್ಲ. ಶಿಥಿಲಾವಸ್ಥೆ ತಲುಪಿದ್ದ ಬಾಗಿಲುಗಳು ಮುರಿದಿವೆ. ಶಾಲಾ ಶೌಚಾಲಯವನ್ನು ಗ್ರಾಮಸ್ಥರೂ ಬಳಸುತ್ತಿರುವುದರಿಂದ ದುರ್ವಾಸನೆಯಿಂದ ಕೂಡಿವೆ. ಶಾಲೆಯ ಸುತ್ತಾ ಯಾವುದೇ ಭದ್ರತಾ ವ್ಯವಸ್ಥೆ ಇಲ್ಲ. ಬೆಳಕಿನ ವ್ಯವಸ್ಥೆ ಇಲ್ಲವೇ ಇಲ್ಲ. ಶಾಲಾ ಕಿಟಕಿಗಳೇ ದನ ಕರು ಕಟ್ಟುವ ಗೂಟಗಳಾಗಿವೆ ಎಂದು ಜನರು ಆರೋಪಿಸುತ್ತಾರೆ.

ಶಾಲೆಯಲ್ಲಿ ಕಂಪ್ಯೂಟರ್‌ ಇದ್ದರೂ ಕಲಿಸಲು ಶಿಕ್ಷಕರಿಲ್ಲದ ಕಾರಣ ಕಂಪ್ಯೂಟರ್‌ಗಳು ದೂಳು ಹಿಡಿಯುತ್ತಿವೆ. ಇಂತಹ ಸ್ಥಿತಿಯ ಕಟ್ಟಡದಲ್ಲೇ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಲಾಗಿದೆ. 30 ಮಕ್ಕಳು ದಾಖಲಾಗಿದ್ದಾರೆ. ಅತಿಥಿ ಶಿಕ್ಷಕಿಯನ್ನು ನೇಮಿಸಿಕೊಳ್ಳಲಾಗಿದೆ.

‘ಶಾಲೆಯ ಸ್ಥಿತಿಯ ಬಗ್ಗೆ ಯಾರೊಬ್ಬರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಮೇಲಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ. ಏನೂ ಪ್ರಯೋಜನವಾಗಿಲ್ಲ. ಅಪಾಯ ಸಂಭವಿಸುವ ಮೊದಲು ಕ್ರಮ ಕೈಗೊಳ್ಳಬೇಕು’ ಎಂದು ಶಾಲೆಯ ಮುಖ್ಯ ಶಿಕ್ಷಕಿ ಕೆ. ಎಂ.ಲತಾ ಒತ್ತಯಿಸಿದರು.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry