ಹರಕೆ ತೀರಿಸಲು ತೆರಳುವ ಭಕ್ತರ ಪರದಾಟ

ಸೋಮವಾರ, ಜೂನ್ 24, 2019
26 °C

ಹರಕೆ ತೀರಿಸಲು ತೆರಳುವ ಭಕ್ತರ ಪರದಾಟ

Published:
Updated:
ಹರಕೆ ತೀರಿಸಲು ತೆರಳುವ ಭಕ್ತರ ಪರದಾಟ

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಪುಣ್ಯಸ್ಥಳಗಳಲ್ಲಿ ಒಂದಾದ ಅಕ್ನಾರಹಳ್ಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಸ್ಥಳಕ್ಕೆ ಬಂದು ಗಂಗಮ್ಮನ ಪೂಜೆ ನೆರವೇರಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಭಕ್ತ ಸಮೂಹದಲ್ಲಿ ಇದೆ.ಈಚೆಗೆ ಸುರಿದ ಮಳೆಯಿಂದ ಹಳ್ಳದಲ್ಲಿ ನೀರು ಬಂದಿದ್ದು, ಪೂಜೆ ಸಲ್ಲಿಸಲು ನವ ವಿವಾಹಿತರು, ಸಂತಾನಫಲಕ್ಕಾಗಿ ಹರಕೆ ಹೊತ್ತವರು, ಒಕ್ಕಲ ಮಕ್ಕಳು ಪೂಜೆ ಸಲ್ಲಿಸಲು ಬರುತ್ತಿದ್ದಾರೆ

ತಾಲ್ಲೂಕಿನ ಮಾಳಿಗೆಹಳ್ಳಿ, ಬ್ಯಾಲದಕೆರೆ ಮಾರ್ಗ 7 ಕಿ.ಮೀ ಸಾಗಿದರೆ ಈ ಸ್ಥಳ ಸಿಗುತ್ತದೆ. ಇನ್ನೊಂದು ಮಾರ್ಗ ನಾಗತಿಕೆರೆ ಏರಿಯ ಮೇಲೆ 4 ಕಿ.ಮೀ ಸಾಗಬೇಕು. ಈ ಎರಡೂ ಮಾರ್ಗ ಬಿಟ್ಟರೆ ಬೇರೆ ಇಲ್ಲ. ಆದರೆ, ಇವೆರಡೂ ಹಾಳಾಗಿರುವುದು ಸಂಚಾರಕ್ಕೆ ಅಡಚಣೆಯಾಗಿದೆ. ನಡೆದುಕೊಂಡೇ ಸಾಗಬೇಕಾದ ಪರಿಸ್ಥಿತಿ ಬಂದಿದೆ ಎಂದು ಸಾರ್ವಜನಿಕರು ಸಮಸ್ಯೆ ವಿವರಿಸುತ್ತಾರೆ.

ಅಕ್ನಾರಹಳ್ಳ ಕುರುಚಲು ಕಾಡಿನ ಮಧ್ಯೆ ಇರುವುದರಿಂದ ಕರಡಿ, ಚಿರತೆಯಂತಹ ಕಾಡು ಪ್ರಾಣಿಗಳ ಭಯ ಇದೆ. ಸಂಬಂಧಪಟ್ಟ ಇಲಾಖೆಯವರು ಬೇಗ ರಸ್ತೆ ದುರಸ್ತಿ ಪಡಿಸಿ ಕೊಟ್ಟರೆ ಅನುಕೂಲವಾಗುತ್ತದೆ. ಅಲ್ಲದೇ ನೀರು, ತಂಗುದಾಣದಂತಹ ಸೌಕರ್ಯ ಕಲ್ಪಿಸಿಕೊಡಬೇಕು ಎಂದು ಇಲ್ಲಿಗೆ ಬಂದ ಭಕ್ತರು ಮನವಿ ಮಾಡುತ್ತಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry